ADVERTISEMENT

ಲೆಗ್ಗಿನ್ಸ್‌ ಧರಿಸಿದಕ್ಕೆ ಪ್ರಯಾಣಕ್ಕೆ ನಿರ್ಬಂಧ

ಪಿಟಿಐ
Published 27 ಮಾರ್ಚ್ 2017, 19:31 IST
Last Updated 27 ಮಾರ್ಚ್ 2017, 19:31 IST

ವಾಷಿಂಗ್ಟನ್‌: ಲೆಗ್ಗಿನ್ಸ್‌ ಧರಿಸಿದ್ದ ಕಾರಣಕ್ಕೆ ಇಬ್ಬರು ಯುವತಿಯರ ವಿಮಾನ ಪ್ರಯಾಣಕ್ಕೆ ಯುನೈಟೆಡ್‌ ಏರ್‌ಲೈನ್ಸ್‌ ಅವಕಾಶ ನಿರಾಕರಿಸಿದೆ. ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. 

ಉದ್ಯೋಗ ಪ್ರಯಾಣಿಕ ಪಾಸ್‌ ಹೊಂದಿದ್ದ ಯುವತಿಯರು ಭಾನುವಾರ ಬೆಳಿಗ್ಗೆ ಡೆನ್ವರ್‌ನಿಂದ ಮಿನ್ನೆಪೊಲಿಸ್‌ಗೆ ಪ್ರಯಾಣಿಸಬೇಕಿತ್ತು. ಆದರೆ ಏರ್‌ಲೈನ್ಸ್‌ನ ವಸ್ತ್ರಸಂಹಿತೆಯನ್ನು ಅನುಸರಿಸದ ಕಾರಣ ವಿಮಾನ ಪ್ರಯಾಣ ನಿರಾಕರಿಸಲಾಗಿದೆ ಎಂದು ಏರ್‌ಲೈನ್ಸ್‌ನ ಜೋನಾಥನ್‌ ಗೌರಿನ್‌ ತಿಳಿಸಿದ್ದಾರೆ. ಲೆಗ್ಗಿನ್ಸ್‌ ಧರಿಸಿದ್ದ ಮತ್ತೊಬ್ಬ ಯುವತಿ ಸಂಸ್ಥೆಯ ನೀತಿಗೆ ಅನುಗುಣವಾದ ಬಟ್ಟೆ ಧರಿಸಿದ ಬಳಿಕ ಆಕೆಗೆ ಪ್ರಯಾಣಿಸಲು ಅನುಮತಿ ನೀಡಲಾಯಿತು.

ಸಂಸ್ಥೆಯ ನೀತಿಯು ಬಲಾತ್ಕಾರದ್ದು ಮತ್ತು ಲಿಂಗತಾರತಮ್ಯದಿಂದ ಕೂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.