ADVERTISEMENT

ಲೈಂಗಿಕ ಪಾತಕಿಗೆ 472ವರ್ಷ ಶಿಕ್ಷೆ!

ಪಿಟಿಐ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಬ್ರಾಕ್‌ ಫ್ರಾಂಕ್ಲಿನ್‌
ಬ್ರಾಕ್‌ ಫ್ರಾಂಕ್ಲಿನ್‌   

ನ್ಯೂಯಾರ್ಕ್‌: ಲೈಂಗಿಕತೆಗಾಗಿ ಮಕ್ಕಳನ್ನು ಅಕ್ರಮ ಸಾಗಣೆ ಮಾಡುತ್ತಿದ್ದ 31ವರ್ಷದ ವ್ಯಕ್ತಿಗೆ 472ವರ್ಷಗಳ ಶಿಕ್ಷೆ ವಿಧಿಸಿ ಅಮೆರಿಕ ಕೋರ್ಟ್‌ ಆದೇಶಿಸಿದೆ. ಅಮೆರಿಕದ ನ್ಯಾಯಾಂಗ ಇತಿಹಾಸದಲ್ಲಿಯೇ ಇದು ಅತ್ಯಂತ ದೀರ್ಘ ಶಿಕ್ಷೆ ಎನಿಸಿಕೊಂಡಿದೆ.

ಬ್ರಾಕ್‌ ಫ್ರಾಂಕ್ಲಿನ್‌ ಎಂಬ ಕೊಲೊರಾಡೊ ನಿವಾಸಿ ಈ ಶಿಕ್ಷೆಗೆ ಒಳದಾದವ. ಮಾನವ ಕಳ್ಳ ಸಾಗಣೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವೃತ್ತಿಗೆ ಮಕ್ಕಳ ಬಳಕೆ, ಅಪಹರಣ ಹೀಗೆ 30 ಬಗೆಯ ಅಪರಾಧಗಳನ್ನು ಈತ ಎಸಗಿದ್ದಾನೆ. ಮಕ್ಕಳಿಗೆ ಡ್ರಗ್ಸ್‌ ಸೇವನೆ ಮಾಡಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡು ನಂತರ ಆನ್‌ಲೈನ್‌ ಮೂಲಕ ಅವರನ್ನು ಮಾರಾಟ ಮಾಡುತ್ತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT