ADVERTISEMENT

ವಿಮಾನದಲ್ಲಿ ನಿಂತುಕೊಂಡೇ ಪ್ರಯಾಣ: ತನಿಖೆಗೆ ಪಾಕ್‌ ಆದೇಶ

ಪಿಟಿಐ
Published 26 ಫೆಬ್ರುವರಿ 2017, 20:17 IST
Last Updated 26 ಫೆಬ್ರುವರಿ 2017, 20:17 IST
ವಿಮಾನದಲ್ಲಿ ನಿಂತುಕೊಂಡೇ ಪ್ರಯಾಣ: ತನಿಖೆಗೆ ಪಾಕ್‌ ಆದೇಶ
ವಿಮಾನದಲ್ಲಿ ನಿಂತುಕೊಂಡೇ ಪ್ರಯಾಣ: ತನಿಖೆಗೆ ಪಾಕ್‌ ಆದೇಶ   
ಇಸ್ಲಾಮಾಬಾದ್‌:  ಕಳೆದ ತಿಂಗಳು ಪಾಕಿಸ್ತಾನದಿಂದ ಸೌದಿ ಅರೇಬಿಯಾಕ್ಕೆ  ಪ್ರಯಾಣಿಸಿದ ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌(ಪಿಐಎ) ವಿಮಾನದಲ್ಲಿ ಲಭ್ಯವಿದ್ದ ಆಸನಕ್ಕಿಂತಲೂ  ಹೆಚ್ಚಾಗಿ ಏಳು ಪ್ರಯಾಣಿಕರಿಗೆ ಅವಕಾಶ ನೀಡಿ ಕರೆದೊಯ್ಯಲಾಗಿತ್ತು ಎಂಬುದು ಬೆಳಕಿಗೆ ಬಂದಿದ್ದು,  ತನಿಖೆಗೆ ಆದೇಶಿಸಲಾಗಿದೆ. 
 
ಕರಾಚಿಯಿಂದ ಮದೀನಾಕ್ಕೆ ತೆರಳಿದ ಬೋಯಿಂಗ್ 777 ಪಿಐಎ ವಿಮಾನ ಪಿಕೆ–743ರಲ್ಲಿ ಏಳು ಪ್ರಯಾಣಿಕರನ್ನು ಆಸನಗಳ ನಡುವೆ ನಿಲ್ಲಿಸಿಕೊಂಡೇ ಕರೆದೊಯ್ಯಲಾಗಿತ್ತು. ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯಲ್ಲಿ ಭದ್ರತಾ ಲೋಪವಾಗಿದೆ ಎಂಬ ಬಗ್ಗೆ ತನಿಖೆ ಆರಂಭವಾಗಿದೆ.
 
ಜನವರಿ 20 ರಂದು ಹೆಚ್ಚುವರಿ ಪ್ರಯಾಣಿಕರಿಗೆ ಅವಕಾಶ ನೀಡಲಾಗಿತ್ತು . ಅವರಿಗೆ ನಿಂತುಕೊಂಡೇ ಪ್ರಯಾಣಿಸಲು ಒತ್ತಾಯಿಸಲಾಗಿತ್ತು ಎಂದು ‘ಡಾನ್’ ವರದಿ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.