ADVERTISEMENT

ವಿಶ್ವದ ಮೊದಲ ಗಗನ ಟ್ಯಾಕ್ಸಿ ಸೇವೆಗೆ ಶೀಘ್ರ ಚಾಲನೆ

ಏಜೆನ್ಸೀಸ್
Published 20 ಫೆಬ್ರುವರಿ 2017, 13:49 IST
Last Updated 20 ಫೆಬ್ರುವರಿ 2017, 13:49 IST
ವಿಶ್ವದ ಮೊದಲ ಗಗನ ಟ್ಯಾಕ್ಸಿ ಸೇವೆಗೆ ಶೀಘ್ರ ಚಾಲನೆ
ವಿಶ್ವದ ಮೊದಲ ಗಗನ ಟ್ಯಾಕ್ಸಿ ಸೇವೆಗೆ ಶೀಘ್ರ ಚಾಲನೆ   

ದುಬೈ: ರಸ್ತೆಯ ಮೇಲೆ ಓಡಾಡುವ ಟ್ಯಾಕ್ಸಿಗಳು ಇನ್ನು ಕೆಲವೇ ದಿನಗಳಲ್ಲಿ ಆಗಸದಲ್ಲಿ ಹಾರಾಡಲಿವೆ.

ಹೌದು, ಮುಂಬರುವ ಜುಲೈ ತಿಂಗಳ ಅಂತ್ಯಕ್ಕೆ ಸ್ವಯಂಚಾಲಿತ ಹಾರಾಡುವ ಕಾರುಗಳು ಲಭ್ಯವಾಗಲಿವೆ. ವೈಮಾನಿಕ ಶೆಟಲ್‌ ಸೇವೆ ಎಂದು ಹೆಸರಿಸಲಾಗುವ ಸೇವೆ ದುಬೈನಲ್ಲಿ ಲಭ್ಯವಾಗಲಿದೆ.

ಈ ಮಾದರಿ ಟ್ಯಾಕ್ಸಿ ಸೇವೆಯ ವಿನ್ಯಾಸವು ವಿಶ್ವ ಶೃಂಗ ಸಭೆಯಲ್ಲಿ ಪ್ರದರ್ಶನಗೊಂಡು ಅಂಗೀಕೃತಗೊಂಡಿದೆ. ದುಬೈನ ಆಕಾಶದಲ್ಲಿ ಪ್ರಾಯೋಗಿಕ ಹಂತದಲ್ಲಿರುವ ಎಎವಿ (ಆಕಾಶದ ಟ್ಯಾಕ್ಸಿ) ಸೇವೆ ಮುಂದಿನ ಜುಲೈನಲ್ಲಿ ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳ್ಳಲಿವೆ ಎಂದು ದುಬೈನ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರದ (ಆರ್‌ಟಿಎ) ನಿರ್ದೇಶಕ ಮತ್ತರ್ ಅಲ್‌–ತಯರ್‌ ಹೇಳಿದ್ದಾರೆ.



ಬಳಕೆ ಹೇಗೆ?
ಟ್ಯಾಕ್ಸಿ ಬುಕ್ ಮಾಡುವಾಗ ಅನುಸರಿಸುವ ಮಾರ್ಗಗಳನ್ನೇ ಇಲ್ಲೂ ಕೂಡ ಅಳವಡಿಸಿಕೊಳ್ಳಬೇಕು. ನಿರ್ದಿಷ್ಟ ಸ್ಥಳದ ವಿವರಗಳ ಮಾಹಿತಿ ನೀಡಬೇಕು. ಈ ಸೇವೆಯ ನಿರ್ವಹಣೆಗಾಗಿ ಸೇವಾಕೇಂದ್ರ ಸ್ಥಾಪಿಸಲಾಗುವುದು. ಇ ಹ್ಯಾಂಗ್‌ 184 ಕ್ವಾಡ್‌ಕಾಪ್ಟರ್‌ ಹೆಸರಿನ ಹಾರಾಟುವ ಟ್ಯಾಕ್ಸಿಗಳು ಗಂಟೆಗೆ 100 ಕಿ.ಮಿ. ವೇಗದಲ್ಲಿ ಚಲಿಸಬಲ್ಲವು. 300 ಮೀಟರ್‌ ( ಸಾವಿರ ಫೀಟ್‌) ಎತ್ತರ ಕಾಯ್ದುಕೊಳ್ಳುತ್ತವೆ ಎಂದು ಆರ್‌ಟಿಎ ಅಧಿಕಾರಿಗಳು ಹೇಳಿದ್ದಾರೆ.

ನೀವಿರುವ ಸ್ಥಳವನ್ನು ಇ ಹ್ಯಾಂಗ್‌ಗೆ ರವಾನಿಸಿದರೆ ಆಟೋ ಪೈಲಟ್‌ ಮೋಡ್‌ನಿಂದ ಸ್ವಯಂಚಾಲಿತಗೊಂಡು ನಿಮ್ಮ ಬಳಿಗೆ ಬರಲಿದೆ. ಒಮ್ಮೆಗೆ 40–50 ಕಿ.ಮಿ. ದೂರ ಕ್ರಮಿಸಬಲ್ಲದು.

ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ಬೇಸಿಗೆಯ ಶಾಖ ತಡೆಯಲು ಹೊಸ ಆವಿಷ್ಕಾರಕ್ಕೆ ನಾಂದಿಯಾಗಿದೆ. ಈ ಪ್ರಯತ್ನದಲ್ಲಿ ಯಶಸ್ವಿಯಾದರೆ 2030 ರ ವೇಳೆಗೆ ದುಬೈ ವಿಶ್ವದ ತಂತ್ರಜ್ಞಾನ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT