ADVERTISEMENT

‘ವೈರಿಗಳ ಹತ್ಯೆಗೆ ಯುವತಿಯರ ಬಳಕೆ’

ಏಜೆನ್ಸೀಸ್
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ಸೋಲ್: ತನ್ನ ವಿರೋಧಿಗಳ ಹತ್ಯೆಗೆ ಉತ್ತರ ಕೊರಿಯಾ ಸುಂದರ ಮಹಿಳೆಯರನ್ನು ಬಳಸಿಕೊಳ್ಳುತ್ತಿದೆ ಎಂದು ಸರ್ವಾಧಿಕಾರಿ ಕಿಮ್ ಜಾಂಗ್‌ ಉನ್ ಅವರ ಟೀಕಾಕಾರ ಆನ್‌ ಚಾನ್‌ 2 ಹೇಳಿದ್ದಾರೆ.
 
ಶಸ್ತ್ರ ಮತ್ತು ವಿಷಯುಕ್ತ ಸಾಧನಗಳನ್ನು ಹೊಂದಿರುವ ಮಹಿಳಾ ಕೊಲೆಗಾರರು ಪುರುಷರಿಗಿಂತ ಹೆಚ್ಚು ಸುಲಭವಾಗಿ ತಮ್ಮ ಕೆಲಸ ಮಾಡಬಲ್ಲರು. ವಿಷ ಬಳಸಿ ಹತ್ಯೆ ಮಾಡುವುದಕ್ಕಾಗಿ ಯುವತಿಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. 
 
ಮಲೇಷ್ಯಾದಲ್ಲಿ ಕಿಮ್‌ ಜಾಂಗ್ ಉನ್ ಮಲಸಹೋದರ ಕಿಮ್ ಜಾಂಗ್‌ ನಮ್‌ ಅವರ ಹತ್ಯೆ ನಡೆದ ಬೆನ್ನಲ್ಲೇ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. 
 
ಉತ್ತರ ಕೊರಿಯಾ ಸೇನೆಯಲ್ಲಿ ಕಮಾಂಡೊ ಆಗಿದ್ದ ಆನ್‌ ಅವರನ್ನು ದೇಶದ್ರೋಹ ಆರೋಪದಲ್ಲಿ 1979ರಂದು ಗಡೀಪಾರು ಮಾಡಲಾಗಿತ್ತು.
 
ಮೃತದೇಹ ಹಸ್ತಾಂತರ: ಕಿಮ್ ಜಾಂಗ್‌ ನಮ್ ಅವರ ಮೃತದೇಹವನ್ನು ಉತ್ತರ ಕೊರಿಯಾಕ್ಕೆ ಹಸ್ತಾಂತರಿಸುವುದಾಗಿ ಮಲೇಷ್ಯಾ ಉಪಪ್ರಧಾನಿ ತಿಳಿಸಿದ್ದಾರೆ.
ಮೃತದೇಹ ಕಳುಹಿಸುವುದಕ್ಕೂ ಮುನ್ನ ಕೆಲವು ಪ್ರಕ್ರಿಯೆಗಳು ನಡೆಯಬೇಕಿದೆ ಎಂದು ಅವರು ಹೇಳಿದ್ದಾರೆ.
 
**
ಮತ್ತೊಬ್ಬ ಮಹಿಳೆ ಬಂಧನ
ಕ್ವಾಲಾಲಂಪುರ: ಕಿಮ್‌ ಜಾಂಗ್‌ ನಮ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೇಷ್ಯಾ ಪೊಲೀಸರು ಮತ್ತೊಬ್ಬ ಮಹಿಳೆಯನ್ನು ಗುರುವಾರ ಬಂಧಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.