ADVERTISEMENT

ಶ್ರೀ ಶ್ರೀ ರವಿಶಂಕರ್‌ಗೆ ಐಎಸ್‌ ಉಗ್ರರ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 16:47 IST
Last Updated 28 ಮಾರ್ಚ್ 2015, 16:47 IST

ಕ್ವಾಲಾಲಂಪುರ (ಪಿಟಿಐ): ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರಿಗೆ ಇಸ್ಲಾಮಿಕ್‌ ಸ್ಟೇಟ್ ಉಗ್ರರಿಂದ ಜೀವ ಬೆದರಿಕೆ ಬಂದಿದೆ ಎಂದು ಅವರ ಆಪ್ತರೊಬ್ಬರು ಮಲೇಷ್ಯಾದಲ್ಲಿ ಶನಿವಾರ ಹೇಳಿದ್ದಾರೆ.

‘ರವಿಶಂಕರ್ ಅವರು ಪೌರಾತ್ಯ ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಅವರು ಶುಕ್ರವಾರ ಮಲೇಷ್ಯಾ ತಲುಪಿದ್ದಾರೆ. ಕೆಲವು ದಿನಗಳ ಹಿಂದೆ, ಅವರು ಕಾಂಬೋಡಿಯಾದಲ್ಲಿದ್ದರು. ಐಎಸ್‌ ಉಗ್ರರಿಂದ ನಮಗೆ ಬೆದರಿಕೆ ಬಂದಿತ್ತು. ಹೋಟೆಲ್‌ ಮ್ಯಾನೇಜರ್, ಆರ್ಟ್‌ ಆಫ್ ಲಿವಿಂಗ್ ನಿರ್ದೇಶಕ ಹಾಗೂ ಅದರ ಒಬ್ಬ ಹಿರಿಯ ಬೋಧಕ ಸಿಬ್ಬಂದಿಗೆ ಬೆದರಿಕೆ ಬಂದಿದ್ದವು. ನೀವು ನಿಮ್ಮ ಯೋಜನೆಯೊಂದಿಗೆ ಮುಂದುವರಿದರೆ ಪರಿಣಾಮ ಎದುರಿಸುವಿರಿ ಎಂದು ಪತ್ರದಲ್ಲಿ ಎಚ್ಚರಿಸಲಾಗಿತ್ತು’ ಎಂದು ಆರ್ಟ್‌ ಆಫ್ ಲಿವಿಂಗ್ ವಕ್ತಾರ ನಕುಲ್ ಧವನ್ ಅವರು ತಿಳಿಸಿದ್ದಾರೆ.

‘ಸಂಬಂಧಿತ ಅಧಿಕಾರಿಗಳು ಈ ಸಂಬಂಧ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಾವು ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದೇವೆ. ಪತ್ರದ ಮೂಲವನ್ನು ಶೋಧಿಸುವ ನಿಟ್ಟಿನಲ್ಲಿ ನಾವೂ ತನಿಖೆಯನ್ನೂ ಮಾಡಿದ್ದೇವೆ. ನಾವು ಯೋಜನೆಯನ್ನು ಮುಂದುವರಿಸುತ್ತಿದ್ದೇವೆ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.