ADVERTISEMENT

ಷರೀಫ್‌ ಪತ್ನಿಗೆ ಗೆಲುವು

ಪಿಟಿಐ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST

ಲಾಹೋರ್: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಷರೀಫ್ ಅವರ ಪತ್ನಿ ಬೇಗಂ ಕುಲ್ಸೂಮ್‌ ಅವರು (ಪಿಎಂಎಲ್‌–ಎನ್‌ ಪಕ್ಷ) ಗೆಲುವು ಸಾಧಿಸಿದ್ದಾರೆ.

ನವಾಜ್‌ ಷರೀಫ್‌ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಷರೀಫ್‌ ಬಣದ ಗೆಲುವಿನ ಅಂತರ ಕಡಿಮೆಯಾಗಿರುವುದನ್ನು ‘ನಮ್ಮ ನೈತಿಕ ಗೆಲುವು. ಇದು ಆಡಳಿತ ಪಕ್ಷದ ಸೋಲು’ ಎಂದು ವಿರೋಧ ಪಕ್ಷ ಬಣ್ಣಿಸಿದೆ.

‘ನಮ್ಮ ತಂದೆಯವರ ವಿರುದ್ಧ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ಜನ ತಿರಸ್ಕರಿಸಿದ್ದಾರೆ’ ಎಂಬ ಷರೀಫ್‌ ಪುತ್ರಿ ಮರಿಯಂ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ವಿರೋಧಪಕ್ಷ ಈ ಹೇಳಿಕೆ ನೀಡಿದೆ. ಮರಿಯಂ, ಆಕೆಯ ಪತಿ,ಇಬ್ಬರು ಸಹೋದರರು ಕೂಡಾ ಪನಾಮ ಪೇಪರ್ಸ್‌ ಹಗರಣದಲ್ಲಿ ಆರೋಪಿಗಳಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.