ADVERTISEMENT

ಸಭೆ ವಿಫಲ

​ಪ್ರಜಾವಾಣಿ ವಾರ್ತೆ
Published 24 ಜುಲೈ 2016, 19:30 IST
Last Updated 24 ಜುಲೈ 2016, 19:30 IST

ವಿಯೆಂಟಿಯಾನ್‌, ಲಾವೊಸ್ (ಎಪಿ): ದಕ್ಷಿಣ ಚೀನಾ ಸಮುದ್ರ ಪ್ರದೇಶದ ಮೇಲಿನ ಚೀನಾದ ಹಕ್ಕು ಪ್ರತಿಪಾದನೆಯ ವಿವಾದವನ್ನು ನಿರ್ವಹಿಸುವುದರ ಕುರಿತು ಒಮ್ಮತಾಭಿಪ್ರಾಯಕ್ಕೆ ಬರಲು ಆಗ್ನೇಯ ಏಷ್ಯಾ ದೇಶಗಳ ಸಂಘಟನೆ ಶನಿವಾರ ವಿಫಲವಾಗಿದೆ.

ಆಗ್ನೇಯ ಏಷ್ಯಾ ದೇಶಗಳ ಸಂಘಟನೆಯ (ಆಸಿಯಾನ್‌) 10 ದೇಶಗಳ ವಿದೇಶಾಂಗ ಸಚಿವರು ಹಲವು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಆದರೆ ಸಭೆಯಿಂದ ಯಾವುದೇ ಫಲಿತಾಂಶ ಹೊರಬರಲಿಲ್ಲ.

‘ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿವಾದಗಳ ಕುರಿತು ಸಮಗ್ರ ಮತ್ತು ರಚನಾತ್ಮಕ ಅಭಿಪ್ರಾಯ ವಿನಿಮಯ ನಡೆಯಿತು. ಅಲ್ಲದೆ, ಮಧ್ಯಪ್ರಾಚ್ಯ, ಕೊರಿಯಾ ಹಾಗೂ ದಕ್ಷಿಣ ಚೀನಾ ಸಮುದ್ರ ಪ್ರದೇಶಗಳಲ್ಲಿನ ಬೆಳವಣಿಗೆಗಳ ಕುರಿತೂ ಚರ್ಚಿಸಲಾಯಿತು’ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

‘ಸಮಾಲೋಚನೆ ಇನ್ನೂ ಪೂರ್ಣಗೊಂಡಿಲ್ಲ. ವಿವಾದದ ಕುರಿತು ಆಸಿಯಾನ್ ದೇಶಗಳ ಚರ್ಚೆ ಮುಂದುವರಿಯಲಿದೆ’ ಎಂದು ಥಾಯ್‌  ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಸ್ಫೋಟ: 15 ಸಾವು
ಬಾಗ್ದಾದ್‌ (ಎಎಫ್‌ಪಿ):
ಉತ್ತರ ಬಾಗ್ದಾದ್‌ನ ಷಿಯಾ ಪ್ರದೇಶದಲ್ಲಿ ಐಎಸ್‌ ಉಗ್ರರು ನಡೆಸಿದ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 15 ಜನರು  ಸಾವನ್ನಪ್ಪಿದ್ದಾರೆ.

ಶಿಯಾ ಪಂಗಡದ ಪ್ರಮುಖ ಸ್ಥಳವಾದ ಕಧಿಮಿಯ ಪ್ರದೇಶದ ಚೆಕ್‌ಪಾಯಿಂಟ್‌ ಸಮೀಪ ಈ ಸ್ಫೋಟ ಸಂಭವಿಸಿದ್ದು, 29 ಜನರು ಗಾಯಗೊಂಡಿದ್ದಾರೆ ಎಂದು ಭದ್ರತಾ ಹಾಗೂ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT