ADVERTISEMENT

ಸಲಿಂಗ ವಿವಾಹಕ್ಕೆ ಆಸ್ಟ್ರೇಲಿಯನ್ನರ ಒಪ್ಪಿಗೆ

ಪಿಟಿಐ
Published 15 ನವೆಂಬರ್ 2017, 20:06 IST
Last Updated 15 ನವೆಂಬರ್ 2017, 20:06 IST

ಮೆಲ್ಬರ್ನ್‌: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲು  ಆಸ್ಟ್ರೇಲಿಯನ್ನರು ಬಹುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ.

ದೇಶಾದ್ಯಂತ ಸಲಿಂಗ ವಿವಾಹದ ಬಗ್ಗೆ ನಡೆಸಲಾದ ಎರಡು ತಿಂಗಳ ಸಮೀಕ್ಷೆಯಲ್ಲಿ ಆಚ್ಚರಿಯ ಫಲಿತಾಂಶ ಬಂದಿದೆ. ಶೇಕಡ 61.6 ಮಂದಿ ಸಲಿಂಗ ವಿವಾಹಕ್ಕೆ ಒಲವು ತೋರಿದ್ದಾರೆ. ಶೇಕಡ 38.4 ಮಂದಿ ಮಾತ್ರ ವಿರೋಧ ವ್ಯಕ್ತಪಡಿಸಿ ಮತ ಹಾಕಿದ್ದಾರೆ ಎಂದು ಆಸ್ಟ್ರೇಲಿಯಾದ ಅಂಕಿ–ಅಂಶ ವಿಭಾಗ ತಿಳಿಸಿದೆ.

ಸಮೀಕ್ಷೆಯಲ್ಲಿ 1.27 ಕೋಟಿ ಜನರು ಭಾಗವಹಿಸಿದ್ದರು. 78 ಲಕ್ಷ ಮಂದಿ ಸಲಿಂಗ ವಿವಾಹದ ಪರ ಮತ್ತು 49 ಲಕ್ಷ ಮಂದಿ ವಿರುದ್ಧ ಮತ ಚಲಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.