ADVERTISEMENT

ಸಿರಿಯಾದಲ್ಲಿ ಮುಂದುವರಿದ ದಾಳಿ: 400 ಸಾವು

ಪಿಟಿಐ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ಅಫ್ರೀನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗನನ್ನು ಸಂತೈಸುತ್ತಿದ್ದ ತಂದೆ –ಎಎಫ್‌ಪಿ ಚಿತ್ರಗಳು
ಅಫ್ರೀನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗನನ್ನು ಸಂತೈಸುತ್ತಿದ್ದ ತಂದೆ –ಎಎಫ್‌ಪಿ ಚಿತ್ರಗಳು   

ಡುಮಾ (ಸಿರಿಯಾ): ಸಿರಿಯಾದ ಸರ್ಕಾರಿ ಬೆಂಬಲಿತ ಪಡೆಗಳು ಪೂರ್ವ ಗೊವುಟಾದ ಬಂಡುಕೋರರ ನೆಲೆಗಳ ಮೇಲೆ ನಡೆಸುತ್ತಿರುವ ದಾಳಿ ಮುಂದುವರಿದಿದ್ದು, ಮೃತಪಟ್ಟವರ ಸಂಖ್ಯೆ 400ಕ್ಕೆ ಏರಿದೆ.

‘ಗುರುವಾರ ನಡೆದ ದಾಳಿಯಲ್ಲಿ 46 ಮಂದಿ ಮೃತಪಟ್ಟಿದ್ದಾರೆ’ ಎಂದು ಮಾನವ ಹಕ್ಕುಗಳ ಸಂಘಟನೆಯೊಂದು ತಿಳಿಸಿದೆ.

ಕದನವಿರಾಮ ಘೋಷಣೆಗೆ ಮತ ಚಲಾವಣೆ (ವಿಶ್ವಸಂಸ್ಥೆ ವರದಿ): ಸಿರಿಯಾದಲ್ಲಿ 30 ದಿನಗಳ ಕಾಲ ಕದನವಿರಾಮ ಘೋಷಣೆಗೆ ಸಂಬಂಧಿಸಿದ ಕರಡು ನಿರ್ಣಯದ ಪರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಶುಕ್ರವಾರ ಮತ ಚಲಾಯಿಸಿದೆ.

ADVERTISEMENT

‘ಯುದ್ಧ ಅಪರಾಧ ಎಸಗಿದ ಅಸಾದ್‌’

ವಾಷಿಂಗ್ಟನ್‌ (ಪಿಟಿಐ): ರಷ್ಯಾ ನೆರವಿನಿಂದ ತನ್ನದೇ ದೇಶದ ಜನರ ಮೇಲೆ ದಾಳಿ ನಡೆಸುತ್ತಿರುವ ಸಿರಿಯಾ ಅಧ್ಯಕ್ಷ ಬಶರ್‌–ಅಲ್‌ ಅಸಾದ್‌ ಅವರು ‘ಯುದ್ಧಾಪರಾಧಗಳನ್ನು’ ಎಸಗಿದ್ದಾರೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.

‘ಸಿರಿಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅಮೆರಿಕ ಗಮನಿಸುತ್ತದೆ. ಈ ಯುದ್ಧಾಪರಾಧಗಳು ಮುಂದುವರಿಯಬಾರದು’ ಎಂದು ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ರಾಜ್‌ ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.