ADVERTISEMENT

ಸೂರ್ಯನ ಅಧ್ಯಯನಕ್ಕೆ ನಾಸಾದ ಪಾರ್ಕರ್‌ ನೌಕೆ

ಪಿಟಿಐ
Published 2 ಜೂನ್ 2017, 8:46 IST
Last Updated 2 ಜೂನ್ 2017, 8:46 IST
ಸೂರ್ಯನ ಅಧ್ಯಯನಕ್ಕೆ ನಾಸಾದ  ಪಾರ್ಕರ್‌ ನೌಕೆ
ಸೂರ್ಯನ ಅಧ್ಯಯನಕ್ಕೆ ನಾಸಾದ ಪಾರ್ಕರ್‌ ನೌಕೆ   

ವಾಷಿಂಗ್ಟನ್‌: ಖಗೋಳ ಶಾಸ್ತ್ರಜ್ಞರಲ್ಲಿ ಇಂದಿಗೂ ಕುತೂಹಲದ ಕೇಂದ್ರವಾಗಿರುವ ಸೂರ್ಯನ ರಹಸ್ಯ ಭೇದಿಸಲು ನಾಸಾ ಹೊಸ ಯೋಜನೆ ರೂಪಿಸಿದೆ.

ಸೂರ್ಯಮಂಡಲದ ರಹಸ್ಯ ತಿಳಿಯಲು ಹತ್ತಾರು ವರ್ಷಾಗಳಿಂದ ವಿಜ್ಞಾನಿಗಳು ಹಲವು ರೀತಿಯಲ್ಲಿ ಶೋಧನಾ ಕಾರ್ಯ ನಡೆಸಿದ್ದು, ನಿರಂತರ ಅಧ್ಯಯನದಲ್ಲಿ ತೊಡಗಿದ್ದಾರೆ. ಇದೀಗ ನಾಸಾ ನಕ್ಷತ್ರ ಸೂರ್ಯ ಅಧ್ಯಯನಕ್ಕಾಗಿ ಜಗತ್ತಿನ ಮಿಷನ್‌ ಸಿದ್ಧಪಡಿಸಿ ರವಾನಿಸುತ್ತಿದೆ.

60 ವರ್ಷಗಳ ಹಿಂದೆಯೇ ಸೌರ ಮಾರುತದ ಇರುವಿಕೆಯನ್ನು ಸೂಚಿಸಿದ್ದ ಖಗೋಳಶಾಸ್ತ್ರಜ್ಞ ಯುಗೀನ್‌ ಪಾರ್ಕರ್‌ ಅವರ ಗೌರವಾರ್ಥ ‘ಪಾರ್ಕರ್‌ ಸೌರ ಶೋಧನಾನೌಕೆ’ ಎಂದು ಹೆಸರಿಸಿರುವುದಾಗಿ ನಾಸಾ ತಿಳಿಸಿದೆ.

ADVERTISEMENT

2018ರ ಜುಲೈ 31ರಂದು ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ನೌಕೆ ಉಡಾವಣೆಗೊಳ್ಳಲಿದೆ. ಸೂರ್ಯನಿಂದ 40 ಲಕ್ಷ ಮೈಲು ದೂರದಿಂದ ಸೂರ್ಯನ ಮೇಲಿನ ವಾತಾವರಣವನ್ನು ಅಧ್ಯಯನ ಮಾಡಲಿದೆ. ಈ ನೌಕೆಯು 2500 ಡಿಗ್ರಿ ಪ್ಯಾರಾನಿಟ್‌ ಉಷ್ಣತೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಪ್ರೊ.ಪಾರ್ಕರ್‌ ತಿಳಿಸಿದ್ದಾರೆ.

ಇದರಿಂದ ಸೂರ್ಯನ ಪ್ರಭಾವಲಯದಲ್ಲಿ ಹೆಚ್ಚು ಉಷ್ಣತೆ, ಶಾಖ ಹೊಂದಿರುವ ಹಿಂದಿನ ರಹಸ್ಯವನ್ನು ತಿಳಿಯಲೂ ಸಾಧ್ಯವಾಗಲಿದೆ.

4.5 ಇಂಚು ಕಾರ್ಬನ್‌ ಸಂಯೋಜಿತ ರಕ್ಷಣಾ ಕವಚವನ್ನು ಪಾರ್ಕರ್‌ ನೌಕೆ ಹೊಂದಿರಲಿದ್ದು ಅತಿ ತಾಪವನ್ನು ತಡೆದು ಶೋಧನಾಕಾರ್ಯ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.