ADVERTISEMENT

ಸ್ಕರ್ಟ್‌ ಧರಿಸಿ ಬಾಲಕರ ಪ್ರತಿಭಟನೆ

ಪಿಟಿಐ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಐಎಸ್‌ಸಿಎ ಅಕಾಡೆಮಿಯ ಬಾಲಕರು ಸ್ಕರ್ಟ್‌ ಧರಿಸಿ ಪ್ರತಿಭಟನೆ ನಡೆಸಿದರು
ಐಎಸ್‌ಸಿಎ ಅಕಾಡೆಮಿಯ ಬಾಲಕರು ಸ್ಕರ್ಟ್‌ ಧರಿಸಿ ಪ್ರತಿಭಟನೆ ನಡೆಸಿದರು   

ಲಂಡನ್‌: ಸಮವಸ್ತ್ರ ನೀತಿ ವಿರೋಧಿಸಿ ಇಲ್ಲಿನ ಐಎಸ್‌ಸಿಎ ಅಕಾಡೆಮಿಯ ಬಾಲಕರು ಸ್ಕರ್ಟ್‌  ಧರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

‘ತಾಪಮಾನ ಹೆಚ್ಚಾಗಿದ್ದರೂ ಶಾರ್ಟ್ಸ್‌ ಧರಿಸುವಂತಿಲ್ಲ. ಒಂದು ವೇಳೆ ‘ಶಾರ್ಟ್ಸ್‌ ಧರಿಸಿ ಬಂದರೆ ಅವರನ್ನು ಪ್ರತ್ಯೇಕವಾಗಿ ಇರಿಸಲಾಗುವುದು’ ಎಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಕಟ್ಟಪ್ಪಣೆ ಮಾಡಿದ್ದರು. ಇದು ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

‘ತಾಪಮಾನ ಹೆಚ್ಚಾಗಿರುವ ಬಗ್ಗೆ ನನ್ನ ಮಗ ಮುಖ್ಯ ಶಿಕ್ಷಕಿಗೆ ತಿಳಿಸಿದ್ದ. ಅದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕಿ ‘ಬೇಕಿದ್ದರೆ ಸ್ಕರ್ಟ್‌ ಹಾಕಿಕೊಂಡು ಬರಬಹುದು’ ಎಂದಿದ್ದರು. ಶಾರ್ಟ್ಸ್‌ ಧರಿಸಿದರೆ ಶಿಕ್ಷೆಗೆ ಗುರಿಯಾಗಬೇಕಾದೀತು ಎಂದು ಸ್ಕರ್ಟ್‌ ಧರಿಸಿ ಹೋಗಿದ್ದಾರೆ’ ಎಂದು ಬಾಲಕನ ತಾಯಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ನನ್ನ ಮಗನಿಗೆ ಶಾರ್ಟ್ಸ್‌ ಇಷ್ಟ. ಆದರೆ, ಶಾಲೆಯವರು ಶಾರ್ಟ್ಸ್‌ ಧರಿಸಿ ಬಂದರೆ ಪ್ರತ್ಯೇಕವಾಗಿ ಇಡುವ ಎಚ್ಚರಿಕೆ ನೀಡಿದ್ದಾರೆ’ ಎಂದು ಮತ್ತೊಬ್ಬ ಬಾಲಕನ ತಾಯಿ ಹೇಳಿದ್ದಾರೆ.

‘ಬಹುಶಃ ಮುಖ್ಯ ಶಿಕ್ಷಕಿ ವ್ಯಂಗ್ಯವಾಗಿ ಹೇಳಿದ್ದನ್ನು ಮಕ್ಕಳು ಗಂಭೀರವಾಗಿ ಪರಿಗಣಿಸಿದ್ದಾರೆ. ಸ್ಕರ್ಟ್‌ ತೊಟ್ಟು ಹೋಗಲು ಯಾವ ತೊಂದರೆ ಇಲ್ಲ. ಆದರೆ, ಸ್ಕರ್ಟ್‌ ತುಂಬಾ ಚಿಕ್ಕದಿದ್ದ ಕಾರಣ ವಿದ್ಯಾರ್ಥಿಯೊಬ್ಬನಿಗೆ ತೊಂದರೆ ಆಯಿತು. ಪ್ರತಿಭಟಿಸುವ ಹಕ್ಕು ಮಕ್ಕಳಿಗೂ ಇದೆ’ ಎಂದು    ಪೋಷಕರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.