ADVERTISEMENT

ಹಫೀಜ್‌ ಸಯೀದ್‌ ಗೃಹ ಬಂಧನ ವಿಸ್ತರಣೆ

ಪಿಟಿಐ
Published 27 ಸೆಪ್ಟೆಂಬರ್ 2017, 19:30 IST
Last Updated 27 ಸೆಪ್ಟೆಂಬರ್ 2017, 19:30 IST

ಲಾಹೋರ್‌: ಮುಂಬೈ ದಾಳಿಯ ಸಂಚುಕೋರ ಹಫೀಸ್‌ ಸಯೀದ್‌ ಗೃಹ ಬಂಧನವನ್ನು ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ. ಆತನ ಚಟುವಟಿಕೆಗಳು ಶಾಂತಿಯುತ ವಾತಾವರಣಕ್ಕೆ ಬೆದರಿಕೆ ಒಡ್ಡುವಂತಿವೆ ಎಂದು ಪಂಜಾಬ್‌ ಪ್ರಾಂತ್ಯದ ಅಧಿಕಾರಿಗಳು ಹೇಳಿದ್ದಾರೆ.

ಜಮಾತ್‌ ಉದ್‌ ದವಾ ಉಗ್ರ ಸಂಘಟನೆಯ ಮುಖ್ಯಸ್ಥನಾದ ಸಯೀದ್‌ನನ್ನು ಜನವರಿ 31ರಿಂದ ಗೃಹ ಬಂಧನದಲ್ಲಿ ಇರಿಸಲಾಗಿದೆ. ಸಯೀದ್‌ ಹಾಗೂ ಆತನ ನಾಲ್ವರು ಸಹಚರರಿಗೂ ಗೃಹಬಂಧನವನ್ನು ವಿಸ್ತರಿಸಿ ಪಂಜಾಬ್‌ ಗೃಹ ಇಲಾಖೆ ಆದೇಶ ಹೊರಡಿಸಿದೆ.

ಜಮಾತ್‌ ಹಾಗೂ ಫಲಾಹ್‌ ಎ ಇನ್‌ಸಾನಿಯತ್‌ ಸಂಘಟನೆಗಳು ಸಯೀದ್‌ ನಾಯಕತ್ವದಲ್ಲಿ ದೇಶದಲ್ಲಿ ಅವ್ಯವಸ್ಥೆ ಉಂಟು ಮಾಡಲು ಸಂಚು ರೂಪಿಸಿದ್ದು, ಆತನನ್ನು ನಾಯಕನಂತೆ ಬಿಂಬಿಸಲಾಗುತ್ತಿದೆ ಎಂದು ಗೃಹ ಇಲಾಖೆ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.