ADVERTISEMENT

ಹಮ್ಜಾ ಬಿನ್‌ ಲಾಡೆನ್‌: ಅಲ್‌ಕೈದಾ ಮುಂದಿನ ಉತ್ತರಾಧಿಕಾರಿ ?

ಏಜೆನ್ಸೀಸ್
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ಹಂಜಾ ಲಾಡೆನ್‌
ಹಂಜಾ ಲಾಡೆನ್‌   

ಪ್ಯಾರಿಸ್‌: ಅಮೆರಿಕದ ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ (ವರ್ಲ್ಡ್‌ ಟ್ರೇಡ್ ಸೆಂಟರ್‌) ಅವಳಿ ಗೋಪುರಗಳ ಮೇಲೆ ದಾಳಿ ನಡೆದ 16ನೇ ವರ್ಷಾಚರಣೆ ಅಂಗವಾಗಿ ಅಲ್‌ಕೈದಾ ಸಂಘಟನೆಯು ದೃಶ್ಯ ಸಂಯೋಜನೆಯೊಂದನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಒಸಾಮ ಬಿನ್‌ ಲಾಡೆನ್‌ ಮುಖವನ್ನು ಅವಳಿ ಕಟ್ಟಡಗಳ ಜ್ವಾಲೆಗಳಲ್ಲಿ ತೋರಿಸಲಾಗಿದೆ. 

ಮತ್ತೊಂದು ಮಗ್ಗುಲಿನಲ್ಲಿ ಬಿನ್‌ ಲಾಡೆನ್‌ನ ಮಗ ಹಮ್ಜಾ ಲಾಡೆನ್‌ನನ್ನು ‘ ಜಿಹಾದ್‌ನ ರಾಜಕುಮಾರ’ ಎಂದು ಬಣ್ಣಿಸಲಾಗಿದೆ.

‘ತಂದೆ ಸ್ಥಾಪಿಸಿದ ಭಯೋತ್ಪಾದಕ ಸಂಘಟನೆಯಲ್ಲಿ 28 ವರ್ಷದ ಹಮ್ಜಾ ಮೊದಲಿನಿಂದಲೂ ಸಕ್ರಿಯವಾಗಿ ಗುರುತಿಸಿ
ಕೊಂಡಿದ್ದಾನೆ.  ವಿಶ್ವದಲ್ಲಿರುವ ಜಿಹಾದಿಗಳನ್ನು ಒಗ್ಗೂಡಿಸಲು ಆತ ಯತ್ನಿಸುತ್ತಿದ್ದಾನೆ. ಅಲ್ಲದೆ ನೇಪಥ್ಯಕ್ಕೆ ಸರಿಯುತ್ತಿರುವ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಸ್ಥಾನವನ್ನು ತುಂಬಲು ಯತ್ನಿಸುತ್ತಿದ್ದಾನೆ’ ಎಂದು ಕೆಲವು ಅಧಿಕಾರಿಗಳು ಹಾಗೂ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ತಂದೆ ಸ್ಥಾಪಿಸಿರುವ ಸಂಘಟನೆಯ ನೇತೃತ್ವ ವಹಿಸಲು ಹಮ್ಜಾ ತಯಾರಿ ನಡೆಸುತ್ತಿದ್ದಾನೆ’ ಎಂದು ಎಫ್‌ಬಿಐನ ಮಾಜಿ ವಿಶೇಷ ಏಜೆಂಟ್‌– ಅಲ್‌ಕೈದಾ ಸಂಘಟನೆಯ ವಿಶ್ಲೇಷಕ ಅಲಿ ಸೌಫನ್‌ ಬರೆದ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಬಿನ್‌ ಲಾಡೆನ್‌ನ 20 ಮಕ್ಕಳಲ್ಲಿ ಹಮ್ಜಾ 15ನೇಯವನು ಹಾಗೂ ಮೂರನೇ ಹೆಂಡತಿಯ ಮಗ. ಬಾಲ್ಯದಿಂದಲೇ ಈತ ತಂದೆ ನಡೆದ ಹಾದಿಯಲ್ಲೇ ಗುರುತಿಸಿಕೊಂಡಿದ್ದನು.

ನ್ಯೂಯಾರ್ಕ್‌ನ ಅವಳಿ ಕಟ್ಟಡದ ಮೇಲೆ ಅಲ್‌ಕೈದಾ ದಾಳಿ ನಡೆಸಿದ ಬಳಿಕ ತಂದೆ ಮತ್ತು ಮಗ ಬೇರ್ಪಟ್ಟಿದ್ದರು ಮತ್ತು ನಂತರ ಇಬ್ಬರೂ ಪರಸ್ಪರ ಭೇಟಿಯಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.