ADVERTISEMENT

‘ದ ಇಂಡಿಪೆಂಡೆಂಟ್‌’ ಮುದ್ರಣ ಆವೃತ್ತಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST

ಲಂಡನ್‌ (ಪಿಟಿಐ): ಬ್ರಿಟನ್‌ನ ಪ್ರಮುಖ ದೈನಿಕ ’ದ ಇಂಡಿಪೆಂಡೆಂಟ್‌’ನ ಮುದ್ರಣ ಆವೃತ್ತಿಗಳು ಮುಂದಿನ ತಿಂಗಳಿನಿಂದ ಸ್ಥಗಿತಗೊಳ್ಳಲಿದ್ದು, ಆನ್‌ಲೈನ್‌ ಆವೃತ್ತಿ ಮಾತ್ರ ಪ್ರಕಟಗೊಳ್ಳಲಿದೆ.

‘ಸುಮಾರು 60 ಸಾವಿರ ಪ್ರಸರಣ ಸಂಖ್ಯೆ ಹೊಂದುವ ಮೂಲಕ ಬ್ರಿಟನ್‌ನ ಪ್ರಮುಖ ದೈನಿಕವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಓದುಗರ ಸಂಖ್ಯೆ ತೀವ್ರವಾಗಿ ಕುಸಿದಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾನುವಾರದ ಆವೃತ್ತಿ ’ದ ಇಂಡಿಪೆಂಡೆಂಟ್‌ ಆಫ್‌ ಸಂಡೇ’ ಕೂಡಾ ಆನ್‌ಲೈನ್‌ನಲ್ಲಷ್ಟೇ ಲಭ್ಯವಾಗಲಿದೆ’ ಎಂದು ಗುರುವಾರ ಪ್ರಕಟಿಸಿದೆ.

1986ರಲ್ಲಿ ಆರಂಭವಾದ ದೈನಿಕದ ಪ್ರಸಕ್ತ ಸಂಪಾದಕರಾಗಿರುವ ಭಾರತ ಮೂಲದ ಅಮೋಲ್‌ ರಾಜನ್‌ ಅವರು ಬ್ರಿಟನ್‌ನಲ್ಲಿ ಮಾಧ್ಯಮಗಳ ಪರ ಧ್ವನಿ ಎತ್ತುವ ಮೂಲಕ ಹೆಸರಾಗಿದ್ದಾರೆ. ಅವರು ಆನ್‌ಲೈನ್‌ ಆವೃತ್ತಿಯ ಸಂಪಾದಕರಾಗಿ ಮುಂದುವರಿಯಲಿದ್ದಾರೆ.

ಕಳೆದ ವಾರವಷ್ಟೇ ಮುಂಬೈಯನ್ನು  ‘ಬಾಂಬೆ’ ಎಂದು ಹಳೆಯ ಶೈಲಿಯಲ್ಲಿಯೇ   ತಮ್ಮ ಪತ್ರಿಕೆ ಬಳಸಲಿದೆ. ಮುಂಬೈ ಎನ್ನುವುದು ‘ಹಿಂದುತ್ವ’ವನ್ನು ಬಿಂಬಿಸುತ್ತದೆ ಎಂದು ಸುದ್ದಿ ಪ್ರಕಟಿಸುವ ಮೂಲಕ ಪತ್ರಿಕೆಯೇ ಸುದ್ದಿಯ ವಸ್ತುವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.