ADVERTISEMENT

116ನೇ ವರ್ಷ ಪೂರೈಸಿದ ಪ್ರಪಂಚದ ಹಿರಿಯ ಅಜ್ಜಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 19:30 IST
Last Updated 6 ಜುಲೈ 2015, 19:30 IST

ನ್ಯೂಯಾರ್ಕ್‌ (ಪಿಟಿಐ):  ವಿಶ್ವ ಗಿನ್ನೆಸ್‌ ದಾಖಲೆಯಲ್ಲಿ ವಿಶ್ವದ ಅತಿ ಹಿರಿಯ ವ್ಯಕ್ತಿ ಎಂದು ಗೌರವಕ್ಕೆ ಪಾತ್ರವಾಗಿರುವ ಅಮೆರಿಕದ ಮಹಿಳೆ ಸುಸನ್ನಾ ಮುಶಟ್‌ ಜಾನ್ಸ್‌ ಅವರು ಸೋಮವಾರ ತಮ್ಮ 116ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ನ್ಯೂಯಾರ್ಕ್‌ನ ಬ್ರೋಕ್ಲಿನ್‌ ಎಂಬಲ್ಲಿನ  ಸುಸನ್ನಾ ಅವರು 1899ರ ಜುಲೈ 6ರಂದು ಜನಿಸಿದ್ದಾರೆ ಎಂಬುದನ್ನು ವಿಶ್ವ ಗಿನ್ನೆಸ್‌ ದಾಖಲೆಗಳು ದೃಢಪಡಿಸಿದ್ದು, ವಿಶ್ವದ ಅತಿ ಹಿರಿಯ ವ್ಯಕ್ತಿ ಎಂಬ ಮನ್ನಣೆ ಅವರದ್ದಾಗಿದೆ. ಸುಸನ್ನಾ ಅವರು ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಸೋಮವಾರ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.   ತಮ್ಮ 115ನೇ ವಯಸ್ಸಿನಲ್ಲಿ  ಸುಸನ್ನಾ ಅವರು ಗಿನ್ನೆಸ್‌ ದಾಖಲೆಯ ಗೌರವ ಪಡೆದಿದ್ದರು.

ಸುಸನ್ನಾ  ಅವರಲ್ಲಿ ತಮ್ಮ ದೀರ್ಘಾಯುಷ್ಯದ ಗುಟ್ಟೇನು ಎಂದು ಪ್ರಶ್ನಿಸಿದರೆ, ‘ನಿದ್ದೆ’ ಎಂದು ಹೇಳುತ್ತಾರೆ. ಸದ್ಯ ‌ ಅವರ ಕಣ್ಣು ದೃಷ್ಟಿ ಶಕ್ತಿಯನ್ನು ಕಳೆದುಕೊಂಡಿದ್ದು, ಕಿವಿ ಚುರುಕಾಗಿದೆ. ಈಗಲೂ ಅವರು ದಿನಕ್ಕೆ ಎರಡು ಬಾರಿ ಧ್ಯಾನ ಮಾಡುತ್ತಾರೆ. ಸುಸನ್ನಾ ವಿಶ್ವದ ಅತಿ ಹಿರಿಯ ಮಹಿಳೆ ಎಂಬ ಗಿನ್ನೆಸ್‌ ಗೌರವಕ್ಕೂ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.