ADVERTISEMENT

120 ಪತ್ನಿಯರಿರುವ ಥೈಲ್ಯಾಂಡ್‌ ವ್ಯಕ್ತಿಗೆ 28 ಮಕ್ಕಳು!

ಏಜೆನ್ಸೀಸ್
Published 19 ಸೆಪ್ಟೆಂಬರ್ 2017, 9:52 IST
Last Updated 19 ಸೆಪ್ಟೆಂಬರ್ 2017, 9:52 IST
120 ಪತ್ನಿಯರಿರುವ  ಥೈಲ್ಯಾಂಡ್‌ ವ್ಯಕ್ತಿಗೆ 28 ಮಕ್ಕಳು!
120 ಪತ್ನಿಯರಿರುವ ಥೈಲ್ಯಾಂಡ್‌ ವ್ಯಕ್ತಿಗೆ 28 ಮಕ್ಕಳು!   

ಬ್ಯಾಂಕಾಕ್‌:  ಬಹುಪತ್ನಿತ್ವ ನಿಷೇಧವಿರುವ ಥೈಲ್ಯಾಂಡ್‌ ದೇಶದಲ್ಲಿ ಟ್ರಾಂಬೊನ್‌ ಪ್ರಾರ್ಸೆಟ್‌ ಎಂಬ 58 ವರ್ಷದ ವ್ಯಕ್ತಿಗೆ 120 ಪತ್ನಿಯರಿರುವುದಾಗಿ ಥೈಲ್ಯಾಂಡ್‌ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಟ್ರಾಂಬೊನ್‌ ಪ್ರಾರ್ಸೆಟ್‌ ಅವರು ನಯೋಕ್ ಪ್ರಾಂತ್ಯದ ಪ್ರೋರ್ಮ್ನಿ ಜಿಲ್ಲೆಯ ನಿವಾಸಿ ಎಂದು ಗುರುತಿಸಲಾಗಿದೆ. ಕಟ್ಟಡ ನಿರ್ಮಾಣ ‌ಉದ್ಯಮ ನಡೆಸುತ್ತಿರುವ ಪ್ರಾರ್ಸೆಟ್‌ ರಾಜಕೀಯದಲ್ಲಿ ಸಹ ಗುರುತಿಸಿಕೊಂಡಿದ್ದಾರೆ. ಇವರು ಪ್ರೋರ್ಮ್ನಿ ಜಿಲ್ಲೆಯ ಮುಖ್ಯಸ್ಥರೂ ಆಗಿದ್ದಾರೆ.

ಥೈಲ್ಯಾಂಡ್ ಮಾಧ್ಯಮಗಳು ವರದಿ ಮಾಡಿರುವಂತೆ ಟ್ರಾಂಬೊನ್‌ ಪ್ರಾರ್ಸೆಟ್‌ ಒಟ್ಟು 120 ಮದುವೆಗಳನ್ನು ಆಗಿದ್ದಾರೆ. ಇವರಿಗೆ 28 ಜನ ಮಕ್ಕಳೂ ಇದ್ದಾರೆ. ತನ್ನ 17 ನೇ ವಯಸ್ಸಿಗೆ ಮೊದಲ ಮದುವೆಯಾದ ಪ್ರಾರ್ಸೆಟ್‌ 58ನೇ ವಯಸ್ಸಿನ ವೇಳೆಗೆ 120 ಮದುವೆಗಳನ್ನು ಆಗಿರುವುದಾಗಿ ಒಪ್ಪಿಕೊಂಡಿದ್ದಾರೆ. ತನ್ನ ವಯಸ್ಸಿಗಿಂತ ಚಿಕ್ಕವರನ್ನು ಮದುವೆಯಾಗುತ್ತಿರುವುದಾಗಿ ಪ್ರಾರ್ಸೆಟ್‌ ತಿಳಿಸಿದ್ದಾರೆ. ಇದೇ ವೇಳೆ ತನ್ನ ಕುಟುಂಬ ಸದಸ್ಯರುಗಳನ್ನು ಮಾಧ್ಯಮಗಳಿಗೂ ಪರಿಚಯಿಸಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಪ್ರಸ್ತುತ, 27 ವರ್ಷದ ನ್ಯಾಮ್ ಫಾಮ್‌ ಎಂಬ ಪತ್ನಿಯ ಜೊತೆಯಲ್ಲಿ ಪ್ರಾರ್ಸೆಟ್‌ ವಾಸ ಮಾಡುತ್ತಿದ್ದಾರೆ. 17 ನೇ ವರ್ಷದಿಂದ ಶುರುವಾದ ಸರಣಿ ಮದುವೆಗಳು ಇನ್ನು ನಿಂತಿಲ್ಲ, ಇನ್ನು ಮುಂದೆಯೂ ಮದುವೆಗಳನ್ನು ಆಗುವುದಾಗಿ ಪ್ರಾರ್ಸೆಟ್‌ ತಿಳಿಸಿದ್ದಾರೆ.  ಇವರ ಈ ನಡೆಯನ್ನು ಥೈಲ್ಯಾಂಡ್‌ ಮಹಿಳಾ ಸಂಘಟನೆಗಳು ಖಂಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.