ADVERTISEMENT

3ಡಿ ವೀಕ್ಷಣೆಯಿಂದ ಮಿದುಳು ಚುರುಕು

ನರವಿಜ್ಞಾನಿ ಪ್ಯಾಟ್ರಿಕ್ ನೇತೃತ್ವದ ತಂಡದ ಶೋಧ

​ಪ್ರಜಾವಾಣಿ ವಾರ್ತೆ
Published 31 ಮೇ 2015, 19:30 IST
Last Updated 31 ಮೇ 2015, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌(ಐಎಎನ್‌ಎಸ್‌): 3ಡಿ ಸಿನಿಮಾ ನೋಡುವುದರಿಂದ ಮಿದುಳಿನ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. 3ಡಿ ಸಿನಿಮಾಗಳನ್ನು ವೀಕ್ಷಿಸಿದವರಲ್ಲಿ ಶೇ 23ರಷ್ಟು ಗ್ರಹಿಕಾ ಸಾಮರ್ಥ್ಯ ಹೆಚ್ಚಾಗಿದೆ ಎಂದು ಗೋಲ್ಡ್‌ ಸ್ಮಿತ್‌ ವಿಶ್ವವಿದ್ಯಾಲಯದ ನರವಿಜ್ಞಾನಿ ಪ್ಯಾಟ್ರಿಕ್ ಫಾಗನ್ ನೇತೃತ್ವದ ತಂಡ ತಿಳಿಸಿದೆ.

ಚಿತ್ರ ವೀಕ್ಷಿಸಿದ ನಂತರ 20 ನಿಮಿಷ ಮೆದುಳಿನ ಗ್ರಹಿಕಾ ಸಾಮರ್ಥ್ಯ ಹೆಚ್ಚಿರುತ್ತದೆ. ಯಾವುದೇ ವಿಷಯದ ಬಗ್ಗೆ ಪ್ರತಿಕ್ರಿಯಿಸುವ ಸಾಮರ್ಥ್ಯ ಶೇ 11ರಷ್ಟು ವೃದ್ಧಿಸುತ್ತದೆ  ಎಂದು ಹೇಳಿದ್ದಾರೆ.

ಬ್ರಿಟಿಷ್‌ ವಿಜ್ಞಾನಿಗಳ ಪ್ರಕಾರ 3ಡಿ ಚಿತ್ರಗಳನ್ನು ನೋಡುವುದರಿಂದ ಗ್ರಹಿಸುವ ಸಾಮರ್ಥ್ಯ ಹೆಚ್ಚುತ್ತದೆ. ಲಂಡನ್‌ ಮೂಲದ ಸಂಸ್ಥೆಯೊಂದು ‘ಥ್ರಿಲ್‌ ಪ್ರಯೋಗಾಲಯ’ದ ಪ್ರೊಫೆಸರ್‌ ಬ್ರೆಂದನ್‌ ವಾಕರ್‌ ಜೊತೆಗೂಡಿ ಹೊಸ ರೀತಿಯ ರೋಚಕ ಅನುಭವವುಳ್ಳ ಚಿತ್ರಗಳವನ್ನು ಸಮರ್ಪಿಸಿತ್ತು. 

ಚಿತ್ರ ವೀಕ್ಷಿಸಿದ ಬಳಿಕ ವೀಕ್ಷಕರ ಪ್ರತಿಕ್ರಿಯೆಯಲ್ಲಿ 5ರಷ್ಟು ಸುಧಾರಣೆ ಕಂಡು ಬಂದಿತ್ತು ಎನ್ನಲಾಗಿದೆ. ‘ವೈದ್ಯರು, ಬಾಕ್ಸರ್‌ ಹಾಗೂ ಟೆನ್ನಿಸ್‌ ಆಟಗಾರರು ಯಾವುದೇ ಸವಾಲಿನ ಕೆಲಸ ಮಾಡುವ ಮುನ್ನ 3ಡಿ ಚಿತ್ರಗಳನ್ನು ಸ್ಟೀರಿಯೋಸ್ಕೋಪ್‌ನಲ್ಲಿ  ವೀಕ್ಷಿಸುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು’ ಎಂದಿದ್ದಾರೆ.

3ಡಿ ಚಿತ್ರಗಳನ್ನು ನೋಡುವುದರಿಂದ ವೃದ್ಧಾಪ್ಯದಲ್ಲಿ ಮಿದುಳಿನ ಗ್ರಹಿಕಾ ಸಾಮರ್ಥ್ಯ ಕಡಿಮೆಯಾಗುವುದನ್ನು ತಡೆಯಬಹುದು  ಎಂಬುದಾಗಿ ಪ್ರಾಥಮಿಕ ವರದಿ ತಿಳಿಸಿದೆ ಎಂದು ಫಗಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.