ADVERTISEMENT

5 ಪೌಂಡ್‌ ನೋಟು ರದ್ದು ಪಡಿಸಲು ಹಿಂದೂ ಸಂಘಟನೆಗಳ ಆಗ್ರಹ

ಪಿಟಿಐ
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST
5 ಪೌಂಡ್‌ ನೋಟು ರದ್ದು ಪಡಿಸಲು ಹಿಂದೂ ಸಂಘಟನೆಗಳ ಆಗ್ರಹ
5 ಪೌಂಡ್‌ ನೋಟು ರದ್ದು ಪಡಿಸಲು ಹಿಂದೂ ಸಂಘಟನೆಗಳ ಆಗ್ರಹ   

ಲಂಡನ್‌ : ಬ್ರಿಟನ್‌ನಲ್ಲಿ ಚಲಾವಣೆಯಲ್ಲಿರುವ ಹೊಸ 5 ಪೌಂಡ್‌ ಮುಖಬೆಲೆಯ ನೋಟನ್ನು ರದ್ದುಪಡಿಸುವಂತೆ ಬ್ರಿಟನ್‌ನ ಹಿಂದೂ ಸಂಘಟನೆಗಳ ವೇದಿಕೆ ಆಗ್ರಹಿಸಿದೆ.

‘ಹೊಸ 5 ಪೌಂಡ್‌ ಮುಖಬೆಲೆಯ ನೋಟಿನಲ್ಲಿ ಪ್ರಾಣಿಯ ಕೊಬ್ಬಿನ ಅಂಶವಿದೆ. ಇದರಿಂದ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಲಕ್ಷಾಂತರ ಸಸ್ಯಾಹಾರಿಗಳ ಭಾವನೆಗಳಿಗೆ ಧಕ್ಕೆಯಾಗಿದೆ. ನೋಟು ತಯಾರಿಸಲು ಪ್ರಾಣಿಗಳ ಕೊಬ್ಬಿನ ಅಂಶ ಬಳಸುವುದನ್ನು ನಿಲ್ಲಿಸಬೇಕು’ ಎಂದು ವೇದಿಕೆ ಆಯುಕ್ತ  ಮತ್ತು ಇಸ್ಕಾನ್‌ ದೇವಸ್ಥಾನದ ನಿರ್ದೇಶಕ ಗೌರಿ ದಾಸ್‌ ಒತ್ತಾಯಿಸಿದ್ದಾರೆ.

‘ನೋಟಿಗೆ ಬಳಸಲಾಗಿರುವ ಪ್ರಾಣಿಯ ಕೊಬ್ಬಿನ ಅಂಶ ತೆಗೆಯಿರಿ’ ಶೀರ್ಷಿಕೆ ಅಡಿ ವೇದಿಕೆಯು ಸಹಿ ಸಂಗ್ರಹ ಚಳವಳಿ ಆರಂಭಿಸಿದೆ. ಈಗಾಗಲೇ 1.20 ಲಕ್ಷ ಜನರು ಸಹಿ ಮಾಡಿದ್ದು, 1.50 ಲಕ್ಷ ಸಹಿಗಳ ಸಂಗ್ರಹದ ಬಳಿಕ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ಗೆ ಸಲ್ಲಿಸಲಿದೆ.

ADVERTISEMENT

ಕೇಂಬ್ರಿಡ್ಜ್‌ ನಗರದಲ್ಲಿರುವ ಸಸ್ಯಾಹಾರಿ ಕೆಫೆಯೊಂದರಲ್ಲಿ ಹೊಸ 5 ಪೌಂಡ್‌ನ ನೋಟನ್ನು ಸ್ವೀಕರಿಸಲು ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.