ADVERTISEMENT

ಭಾರತ–ಪಾಕ್ ಭದ್ರತಾ ಸಲಹೆಗಾರರ ಗೋಪ್ಯ ಮಾತುಕತೆ

ಪಿಟಿಐ
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST
ನಾಸೀರ್‌ ಖಾನ್‌ ಜಂಜುವಾ, ಅಜಿತ್‌ ಡೋಭಾಲ್‌
ನಾಸೀರ್‌ ಖಾನ್‌ ಜಂಜುವಾ, ಅಜಿತ್‌ ಡೋಭಾಲ್‌   

ಇಸ್ಲಾಮಾಬಾದ್‌: ಭಾರತ ಹಾಗೂ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಥಾಯ್ಲೆಂಡ್‌ನಲ್ಲಿ ‘ಗೋಪ್ಯ’ ಸಭೆ ನಡೆಸಿದ್ದಾರೆ.

‘ಡಿಸೆಂಬರ್‌ 27ರಂದು ಥಾಯ್ಲೆಂಡ್‌ನಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ನಾಸೀರ್‌ ಖಾನ್‌ ಜಂಜುವಾ ಹಾಗೂ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೋಭಾಲ್‌ ಅವರು ಗೋಪ್ಯ ಸಭೆ ನಡೆಸಿದರು’ ಎಂದು ಪಾಕ್‌ ಎನ್‌ಎಸ್‌ಎ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಡಾನ್‌ನ್ಯೂಸ್‌ ವರದಿ ಮಾಡಿದೆ.

‘ಸಭೆಯು ಫಲಪ್ರದವಾಗಿತ್ತು. ಡೊಭಾಲ್‌ ಅವರು ಧೋರಣೆಯು ಸ್ನೇಹಪರ ಹಾಗೂ ಸಕಾರಾತ್ಮಕವಾಗಿತ್ತು. ರಾಜತಾಂತ್ರಿಕ ಮಾತುಕತೆ ಪುನರ್‌ ಆರಂಭಿಸುವ ನಿಟ್ಟಿನಲ್ಲಿ ಈ ಸಭೆಯು ಸಹಕಾರಿಯಾಗಲಿದೆ’ ಎಂದು ಅವರು ತಿಳಿಸಿದರು.

ADVERTISEMENT

ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್‌ ಜಾಧವ್‌ ಅವರನ್ನು ತಾಯಿ ಹಾಗೂ ಪತ್ನಿ ಭೇಟಿಯಾದ ಬಳಿಕ ಈ ಭೇಟಿ ನಡೆದಿತ್ತು ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.