ADVERTISEMENT

ಕೆನಡಾ, ಇಂಡೋನೇಷ್ಯಾದಲ್ಲಿ ಭೂಕಂಪ: ಅಲಸ್ಕಾ ಕರಾವಳಿಯಲ್ಲಿ ಸುನಾಮಿ ಭೀತಿ

ಏಜೆನ್ಸೀಸ್
Published 23 ಜನವರಿ 2018, 12:42 IST
Last Updated 23 ಜನವರಿ 2018, 12:42 IST
ಕೆನಡಾ, ಇಂಡೋನೇಷ್ಯಾದಲ್ಲಿ ಭೂಕಂಪ: ಅಲಸ್ಕಾ ಕರಾವಳಿಯಲ್ಲಿ ಸುನಾಮಿ ಭೀತಿ
ಕೆನಡಾ, ಇಂಡೋನೇಷ್ಯಾದಲ್ಲಿ ಭೂಕಂಪ: ಅಲಸ್ಕಾ ಕರಾವಳಿಯಲ್ಲಿ ಸುನಾಮಿ ಭೀತಿ   

ಅಲಸ್ಕಾ/ಜಕಾರ್ತಾ: ಕೆನಡಾದ ಅಲಸ್ಕಾ ಹಾಗೂ ಇಂಡೋನೇಷ್ಯಾದ ಜಕಾರ್ತಾದಲ್ಲಿ ಮಂಗಳವಾರ ಭೂಕಂಪ ಸಂಭವಿಸಿದ್ದು, ಅಲಸ್ಕಾ ಕರಾವಳಿಯಲ್ಲಿ ಸುನಾಮಿ ಭೀತಿ ಎದುರಾಗಿದೆ.

ಅಲಸ್ಕಾ ಸುತ್ತಮುತ್ತಲ ಪ್ರದೇಶದಲ್ಲಿ 8.2 ರಷ್ಟು ಭೂಕಂಪ ತೀವ್ರತೆ ದಾಖಲಾಗಿದೆ. ಸುನಾಮಿ ಅಪಾಯ ಇರುವುದರಿಂದ ಕರಾವಳಿ ಸಮೀಪದ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುವಂತೆ ಸೂಚಿಸಲಾಗಿದೆ.

ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದ ಕೆಲವು ಕಟ್ಟಡಗಳಿಗೆ ಹಾನಿಯಾಗಿರುವುದು ವರದಿಯಾಗಿದೆ. ಯಾರಿಗೂ ಅಪಾಯ ಆಗಿರುವ ಕುರಿತು ವರದಿಯಾಗಿಲ್ಲ. 

ADVERTISEMENT

‘ರಿಕ್ಟರ್‌ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದ್ದು, ಭೂಕಂಪನದ ಕೇಂದ್ರಬಿಂದು 10 ಕಿ.ಮೀ ಆಳದಲ್ಲಿತ್ತು’ ಎಂದು ವಿಶ್ವಸಂಸ್ಥೆಯ ಭೂವಿಜ್ಞಾನ ಸಮೀಕ್ಷೆ ತಿಳಿಸಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.