ADVERTISEMENT

ಮಾಲ್ಡೀವ್ಸ್‌ ಬಿಕ್ಕಟ್ಟು: ಅಮೆರಿಕ ಕಳವಳ

ಪಿಟಿಐ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ವಾಷಿಂಗ್ಟನ್‌: ಮಾಲ್ಡೀವ್ಸ್‌ನಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ಅಮೆರಿಕ ಕಳವಳ ವ್ಯಕ್ತಪಡಿಸಿದೆ.

‘ಅಧ್ಯಕ್ಷ ಅಬ್ದುಲ್ ಯಮೀನ್‌ ಅವರು ಅಲ್ಲಿ ಇನ್ನೂ 30 ದಿನಗಳ ಕಾಲ ತುರ್ತು ಪರಿಸ್ಥಿತಿ ವಿಸ್ತರಿಸಿರುವುದು ನಿಜಕ್ಕೂ ಆತಂಕಕಾರಿ’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಹೀದರ್‌ ನೌರೆಟ್‌ ಹೇಳಿದ್ದಾರೆ.

‘ಯಮೀನ್‌ ಅವರು ಕೂಡಲೇ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಬೇಕು. ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಕಾನೂನನ್ನು ಅಲ್ಲಿನ ಸರ್ಕಾರ ಗೌರವಿಸಬೇಕು. ರಾಷ್ಟ್ರದ ಜನರ ಸಾಂವಿಧಾನಿಕ ಹಕ್ಕುಗಳನ್ನು ಅವರಿಗೆ ಮರಳಿಸಬೇಕು’ ಎಂದು ನೌರೆಟ್‌ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.