ADVERTISEMENT

70 ಸುನ್ನಿಗಳ ಹತ್ಯೆ

ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2015, 19:30 IST
Last Updated 8 ಅಕ್ಟೋಬರ್ 2015, 19:30 IST

ಬಾಗ್ದಾದ್‌ (ಎಎಫ್‌ಪಿ): ಸರ್ಕಾರಕ್ಕೆ ನಿಷ್ಠರಾಗಿದ್ದ 70 ಸುನ್ನಿ ಬುಡಕಟ್ಟು ಸದಸ್ಯರನ್ನು ಇಸ್ಲಾಮಿಕ್‌ ಸ್ಟೇಟ್‌ (ಐ.ಎಸ್.) ಉಗ್ರರು ಇರಾಕ್‌ನ  ಪಶ್ಚಿಮ ಭಾಗದಲ್ಲಿ ಕಳೆದ ವಾರ ಹತ್ಯೆ ಮಾಡಿರುವ ಸಂಗತಿ ಬುಡಕಟ್ಟು ನಾಯಕರ ಹಾಗೂ ವಿಶ್ವಸಂಸ್ಥೆಯ ಹೇಳಿಕೆಯಿಂದ ಗುರುವಾರ ಬಹಿರಂಗಗೊಂಡಿದೆ.

ಲಂಕಾಗೆ ನೆರವು
ಕೊಲಂಬೊ (ಐಎಎನ್‌ಎಸ್‌):
ಶ್ರೀಲಂಕಾದ ಯುದ್ಧಪೀಡಿತ ಪ್ರದೇಶದಲ್ಲಿ ಹುದಗಿಸಿಟ್ಟಿರುವ ನೆಲಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯಕ್ಕೆ ಸುಮಾರು ಸಾವಿರ ಕೋಟಿ ಹೆಚ್ಚುವರಿ ಸಹಾಯಧನ ನೀಡುವುದಾಗಿ ಅಮೆರಿಕ ಗುರುವಾರ ಘೋಷಿಸಿದೆ.

ಪ್ರಧಾನಿ ಆಯ್ಕೆ
ಅಡಿಸ್‌ ಅಬಾಬಾ (ಐಎಎನ್‌ಎಸ್‌):
ಹೇಲ್‌ಮರಿಯಮ್‌ ಡೆಸಾಲೆನೆ (50) ಇಥಿಯೋಪಿಯಾ ಪ್ರಧಾನಿಯಾಗಿ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

ಒಬಾಮ ಕ್ಷಮೆ
ವಾಷಿಂಗ್ಟನ್‌ (ಪಿಟಿಐ):
ಆಫ್ಘಾನಿಸ್ತಾನದ ಕುಂಡುಜ್‌ನಲ್ಲಿ ಆಸ್ಪತ್ರೆಯೊಂದರ ಮೇಲೆ ನಡೆದ ಅಮೆರಿಕದ ವಾಯುದಾಳಿಗೆ ಅಧ್ಯಕ್ಷ ಬರಾಕ್‌ ಒಬಾಮ ಅವರು ಮೆಡಿಕಲ್‌ ಚಾರಿಟಿ ಡಾಕ್ಟರ್ಸ್‌ ವಿತೌಟ್‌ ಬಾರ್ಡರ್ಸ್‌ (ಎಂಎಸ್ಎಫ್‌)   ಅಧ್ಯಕ್ಷರ ಕ್ಷಮೆ ಕೋರಿದ್ದಾರೆ.

ನ್ಯಾಟೊ ಆರೋಪ
ವಾಷಿಂಗ್ಟನ್‌ (ಐಎಎನ್ಎಸ್‌):
ಐ.ಎಸ್‌., ಅಲ್‌ ಕೈದಾ ಅಥವಾ ಈ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಸಿರಿಯಾದಲ್ಲಿ ರಷ್ಯಾ ವೈಮಾನಿಕ ದಾಳಿ ನಡೆಸಿಲ್ಲ ಎಂದು ಅಮೆರಿಕ ನೇತೃತ್ವದ ನ್ಯಾಟೊ ಪಡೆ ಆರೋಪಿಸಿದೆ.

ವಿಮಾನ ನಾಪತ್ತೆ
ಕಠ್ಮಂಡು (ಪಿಟಿಐ):
ನೇಪಾಳದ ಅಲ್ಟ್ರಾ–ಲೈಟ್‌ ಕಂಪೆನಿ ವಿಮಾನ  ಗುರುವಾರ ಕಾಣೆಯಾಗಿದ್ದು, ‘ಪೋಖ್ರಾ ವಿಮಾನ ನಿಲ್ದಾಣದಿಂದ ಬೆಳಿಗ್ಗೆ ಹೊರಟಿದ್ದ ವಿಮಾನದಲ್ಲಿ ಪೈಲಟ್‌ ರಷ್ಯಾ ಪ್ರಜೆ ವೆಲೇರಿ ಪುಟಿನ್‌ (50) ಹಾಗೂ ಪ್ರಯಾಣಿಕ ದಕ್ಷಿಣ ಆಫ್ರಿಕಾ ಪ್ರಜೆ ಎಲಿಜಬೆತ್‌ ವೆಲ್‌ (40) ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.