ADVERTISEMENT

706 ಕ್ಯಾರೆಟ್‌ನ ವಜ್ರ ಪತ್ತೆ

ಐಎಎನ್ಎಸ್
Published 17 ಮಾರ್ಚ್ 2017, 19:30 IST
Last Updated 17 ಮಾರ್ಚ್ 2017, 19:30 IST
706 ಕ್ಯಾರೆಟ್‌ನ ವಜ್ರ ಪತ್ತೆ
706 ಕ್ಯಾರೆಟ್‌ನ ವಜ್ರ ಪತ್ತೆ   

ಫ್ರೀಟೌನ್‌: ಪಶ್ಚಿಮ ಆಫ್ರಿಕಾದ ಸಿಯಾರ ಲಿಯೋನ್‌ ದೇಶದ ಗಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ  ಕ್ರೈಸ್ತ ಧರ್ಮಗುರುವೊಬ್ಬರು 706 ಕ್ಯಾರೆಟ್‌ನ ವಜ್ರವನ್ನು ಪತ್ತೆ ಹಚ್ಚಿದ್ದಾರೆ.

ಧರ್ಮಗುರು ಇಮ್ಯಾನುವೆಲ್‌ ಮೊಮೊ ಅವರು  ಕೋನೊ ಪ್ರದೇಶದ ಗಣಿಯಲ್ಲಿ ಈ ವಜ್ರವನ್ನು ಪತ್ತೆಹಚ್ಚಿದ್ದಾರೆ.

‘ಇದುವರೆಗೆ ಲಭಿಸಿದ ವಜ್ರಗಳ ಗಾತ್ರಕ್ಕೆ ಹೋಲಿಸಿದರೆ ಇದು ಹತ್ತನೇ ಸ್ಥಾನದಲ್ಲಿದೆ’ ಎಂದು  ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

‘ದೇಶದ ಅಭಿವೃದ್ಧಿಗಾಗಿ ವಜ್ರವನ್ನು  ಹರಾಜು ಪ್ರಕ್ರಿಯೆಯ ಮೂಲಕ ಮಾರಾಟ ಮಾಡಲಾಗುವುದು’ ಎಂದು ಸರ್ಕಾರದ ಮೂಲಗಳು ಹೇಳಿವೆ.

‘ವಜ್ರವನ್ನು ಸಿಯಾರ ಲಿಯೋನ್‌ ಅಧ್ಯಕ್ಷ ಡಾ. ಎರ್ನೆಸ್ಟ್‌ ಬೈ ಕೊರೊಮ ಅವರಿಗೆ ನೀಡಲಾಗಿದೆ. ಇದನ್ನು ಬೇರೆ ದೇಶಗಳಿಗೆ ಕಳ್ಳಸಾಗಣೆ ಮಾಡದಿರುವುದಕ್ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ’ ಎಂದು ಸರ್ಕಾರದ ಪ್ರಕಟಣೆ  ತಿಳಿಸಿದೆ.

‘ಸಣ್ಣ ಗಣಿಗಳಲ್ಲಿ ಇಂತಹ ವಜ್ರಗಳು ಸಿಗುವುದು ಅಪರೂಪ’ ಎಂದು ವಜ್ರಗಳ ತಜ್ಞ ಪೌಲ್‌ ಜಿಮ್‌ನಿಸ್ಕಿ ಹೇಳಿದ್ದಾರೆ.

2015ರಲ್ಲಿ ಬೋಟ್ಸ್‌ವಾನದ ಗಣಿ ಯೊಂದರಲ್ಲಿ 1,111 ಕ್ಯಾರೆಟ್‌ ವಜ್ರ   ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.