ADVERTISEMENT

75 ವರ್ಷದ ಬಳಿಕ ನೌಕಾಪಡೆ ಸಿಬ್ಬಂದಿ ಅಂತ್ಯಸಂಸ್ಕಾರ!

ಪಿಟಿಐ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST

ವಾಷಿಂಗ್ಟನ್‌: 75 ವರ್ಷಗಳ ಹಿಂದೆ ಮೃತಪಟ್ಟಿದ್ದ  ಅಮೆರಿಕ ನೌಕಾಪಡೆಯ ಅಗ್ನಿಶಾಮಕ ದಳದ ಸಿಬ್ಬಂದಿ ಮೈಕೆಲ್‌ ಗಲಜ್ದಿಕ್‌ ಅವರ ಅಂತ್ಯಸಂಸ್ಕಾರವನ್ನು ಶನಿವಾರ ಸಕಲ ಗೌರವಗಳೊಂದಿಗೆ ನಡೆಸಲಾಯಿತು.

ಇಲ್ಲಿನಾಯಿಸ್‌ನ ಜೊಲೈಟ್‌ನಲ್ಲಿರುವ ಗಲಜ್ದಿಕ್‌ ಅವರ ನಿವಾಸದ ಬಳಿ, ಗ್ರೇಟ್‌ ಲೇಕ್ಸ್‌ ನೌಕಾನೆಲೆ ಸಿಬ್ಬಂದಿ 21 ಕುಶಾಲತೋಪು ಸಿಡಿಸಿ, ವಾದ್ಯ ನುಡಿಸಿ ಅಂತ್ಯಸಂಸ್ಕಾರ ನಡೆಸಿದರು ಎಂದು ಷಿಕಾಗೊ ಟ್ರಿಬ್ಯೂನ್‌ ವರದಿ ಮಾಡಿದೆ.

1941ರ ಡಿ.7ರಂದು ಪರ್ಲ್‌ ಹಾರ್ಬರ್‌ನಲ್ಲಿನ ನೌಕಾನೆಲೆ ಮೇಲೆ ಜಪಾನ್‌ನ ನೌಕಾಪಡೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಪ್ರಥಮ ದರ್ಜೆ ಸಿಬ್ಬಂದಿ ಗಲಜ್ದಿಕ್‌ ಸೇರಿದಂತೆ 2,400 ಮಂದಿ ಮೃತಪಟ್ಟಿದ್ದರು. ಹಲವಾರು ನೌಕೆಗಳು ನಾಶವಾಗಿದ್ದವು.

ADVERTISEMENT

ಮೃತಪಟ್ಟಾಗ ಗಲಜ್ದಿಕ್‌ ಅವರಿಗೆ 25 ವರ್ಷವಾಗಿತ್ತು. ಗುರುತು ಪತ್ತೆಯಾಗದ ಕಾರಣ ಹವಾಯ್‌ ನೌಕಾನೆಲೆಯಲ್ಲಿ ಇತರೆ ನೂರಾರು ನಾವಿಕರೊಂದಿಗೆ ಗಲಜ್ದಿಕ್‌ ಅವರ ಮೃತದೇಹವನ್ನು ಸಾಮೂಹಿಕ ಅಂತ್ಯಸಂಸ್ಕಾರ ಮಾಡಲಾಗಿತ್ತು.

ಆದರೆ, ನೂತನ ತಂತ್ರಜ್ಞಾನ ಬಳಸಿ 2009ರಿಂದ ಡಿಎನ್ಎ ಆಧಾರದಲ್ಲಿ ಗಲಜ್ದಿಕ್‌ ಮೃತದೇಹದ ಗುರುತು ಪತ್ತೆ ಮಾಡುವ ಪ್ರಕ್ರಿಯೆ ಆರಂಭಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.