ADVERTISEMENT

89ನೇ ಆಸ್ಕರ್‌ ಪ್ರಶಸ್ತಿ ಪ್ರದಾನ: ನಟ ಓಂಪುರಿಗೆ ನಮನ

ಪಿಟಿಐ
Published 27 ಫೆಬ್ರುವರಿ 2017, 20:06 IST
Last Updated 27 ಫೆಬ್ರುವರಿ 2017, 20:06 IST
89ನೇ ಆಸ್ಕರ್‌ ಪ್ರಶಸ್ತಿ ಪ್ರದಾನ: ನಟ ಓಂಪುರಿಗೆ ನಮನ
89ನೇ ಆಸ್ಕರ್‌ ಪ್ರಶಸ್ತಿ ಪ್ರದಾನ: ನಟ ಓಂಪುರಿಗೆ ನಮನ   

ಲಾಸ್‌ ಏಂಜಲಿಸ್‌: 89ನೇ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ರಾತ್ರಿ ನಡೆದಿದ್ದು, ಬ್ಯಾರಿ ಜೆಂಕಿನ್ಸ್‌ ಅವರ ‘ಮೂನ್ ಲೈಟ್‌’ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದೆ. 

ಆದರೆ ಅತ್ಯುತ್ತಮ ಚಿತ್ರ ಘೋಷಣೆ ಸಂದರ್ಭದಲ್ಲಿ ಮೊದಲು ‘ಲಾ ಲಾ ಲ್ಯಾಂಡ್‌’ ಹೆಸರನ್ನು ತಪ್ಪಾಗಿ ಹೇಳಿದ್ದರಿಂದ ಗೊಂದಲ ಸೃಷ್ಟಿಯಾಯಿತು.

ನಟ ಓಂಪುರಿಗೆ ನಮನ: ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಗೀತದ ಮೂಲಕ ನಟ ಓಂಪುರಿ ಅವರಿಗೆ ನಮನ ಸಲ್ಲಿಸಲಾಯಿತು. ಈಸ್ಟ್‌ ಈಸ್‌ ಈಸ್ಟ್‌, ಗಾಂಧಿ, ಸಿಟಿ ಆಫ್‌ ಜಾಯ್‌, ವೂಲ್ಫ್‌ ಚಿತ್ರಗಳಲ್ಲಿನ ನಟನೆಯಿಂದ ಅವರು ಹಾಲಿವುಡ್‌ನಲ್ಲಿ ಪ್ರಸಿದ್ಧಿ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.