ADVERTISEMENT

ಭಾರತದ ಬಾಲಕನಿಗೆ ಗೌರವ

ಪಿಟಿಐ
Published 4 ಜುಲೈ 2018, 19:32 IST
Last Updated 4 ಜುಲೈ 2018, 19:32 IST

ದುಬೈ:ಮಾಲಿನ್ಯ ನಿಯಂತ್ರಣದ ಜತೆಗೆ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ದಿನಸಿ ಅಂಗಡಿಗಳಿಗೆ ಪ್ಲಾಸ್ಟಿಕ್‌ ಮುಕ್ತ ಚೀಲಗಳನ್ನು ವಿತರಿಸಿದ ಹತ್ತು ವರ್ಷದ ಭಾರತ ಮೂಲದ ಬಾಲಕನನ್ನು ದುಬೈನಲ್ಲಿ ಗೌರವಿಸಲಾಗಿದೆ.

ಈ ಸಾಧನೆ ಮಾಡಿದಫೈಯಾಜ್‌ ಮಹಮ್ಮದ್‌ಗೆ ದುಬೈ ಪುರಸಭೆ‘ಸುಸ್ಥಿರ ರಾಯಭಾರಿ’ ಎಂಬ ಬಿರುದು ನೀಡಿದೆ.

ಈದ್‌ ದಿನದಂದು ದೊರೆತ₹2,805 ಹಣದಲ್ಲಿ ಈ ಬಾಲಕ 130 ಚೀಲಗಳನ್ನು ಖರೀದಿಸಿ, ಅದರ ಮೇಲೆ ಚಿತ್ರಗಳನ್ನು ಬಿಡಿಸಿ ಮನೆಯ ಸಮೀಪದ ಕಿರಾಣಿ ಅಂಗಡಿಗೆ ನೀಡಿದ್ದಾನೆ.

ADVERTISEMENT

ಅಂಗಡಿಯವರು ಒಂದು ತಿಂಗಳಿಗೆ ಸುಮಾರು 1,200 ಪ್ಲಾಸ್ಟಿಕ್‌ ಚೀಲ ಬಳಸುತ್ತಾರೆ. ಇದನ್ನು ನಿಯಂತ್ರಿಸಲು ಈ ಕಾರ್ಯ ಕೈಗೊಂಡಿರುವುದಾಗಿ ಫೈಯಾಜ್‌ ತಿಳಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.