ADVERTISEMENT

ನೈಜೀರಿಯಾ: ಸಲಿಂಗ ವಿವಾಹದ ವೇಳೆ 67 ಮಂದಿ ಬಂಧನ

ಎಪಿ
Published 29 ಆಗಸ್ಟ್ 2023, 14:08 IST
Last Updated 29 ಆಗಸ್ಟ್ 2023, 14:08 IST
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)   ಪ್ರಜಾವಾಣಿ ಚಿತ್ರ

ಅಬುಜಾ: ‘ಕಾನೂನು ವಿರೋಧಿಯಾದ ಸಲಿಂಗ ವಿವಾಹ ಆಚರಣೆಯಲ್ಲಿ ಭಾಗಿಯಾಗಿದ್ದ 67 ಮಂದಿಯನ್ನು ಬಂಧಿಸಲಾಗಿದೆ’ ಎಂದು ನೈಜೀರಿಯಾ ಪೊಲೀಸರು ಮಂಗಳವಾರ ಹೇಳಿದ್ದಾರೆ.

‘ದಕ್ಷಿಣ ಡೆಲ್ಟಾ ರಾಜ್ಯದ ಎಕ್ಪಾನ್ ಪಟ್ಟಣದಲ್ಲಿ ಸಲಿಂಗ ವಿವಾಹದಲ್ಲಿ ಭಾಗಿಯಾಗಿದ್ದ ‘ಶಂಕಿತ ಸಲಿಂಗಿಗಳನ್ನು’ ಸೋಮವಾರ ಸುಮಾರು 2 ಗಂಟೆಗೆ ಬಂಧಿಸಲಾಯಿತು. ಬಂಧಿತರ ಪೈಕಿ ಇಬ್ಬರು ವಿವಾಹವಾಗಿದ್ದಾರೆ’ ಎಂದು ರಾಜ್ಯ ಪೊಲೀಸ್ ವಕ್ತಾರ ಬ್ರೈಟ್ ಎಡಾಫೆ ಸುದ್ದಿಗಾರರಿಗೆ ತಿಳಿಸಿದರು.

ಆಫ್ರಿಕಾದಲ್ಲಿ ಸಲಿಂಗ ವಿವಾಹವು ಕಾನೂನುಬಾಹಿರವಾಗಿದೆ.  ಸಲಿಂಗ ವಿವಾಹ ತಡೆ ಕಾಯ್ದೆಯನ್ನು ರೂಪಿಸಲಾಗಿದ್ದು, ಸಲಿಂಗಿಗಳಿಗೆ 10 ವರ್ಷದವರೆಗೂ ಶಿಕ್ಷೆ ವಿಧಿಸಬಹುದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.