ADVERTISEMENT

ಬುದ್ಧನ ನಂತರ ಭೂಮಿಗೆ ಬಿದ್ದ ಬೆಳಕು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST

– ಚಿದಾನಂದ ಸಾಲಿ ರಾಯಚೂರು

ಈ ಭೂಮಿ ಮೇಲೆ ಬುದ್ಧನ ನಂತರ ಮೂಡಿದ ಮತ್ತೊಂದು ಮಹಾಬೆಳಕು ನಮ್ಮ ಬಸವಣ್ಣ. ‘ಜಗದ ಕಾರ್ಮಿಕರೇ ಒಂದಾಗಿ’ ಎಂದ ಕಾರ್ಲ್ ಮಾರ್ಕ್ಸ್, ಸತ್ಯ-ಅಹಿಂಸೆ ಬೋಧಿಸಿದ ಗಾಂಧೀಜಿ ಮತ್ತು ಸಮಾನತೆಗಾಗಿ ಹಂಬಲಿಸಿದ ಅಂಬೇಡ್ಕರರಿಗಿಂತ 700 ವರ್ಷಗಳ ಹಿಂದೆಯೇ ಮಾದಾರ ಚೆನ್ನಯ್ಯನ ಮಗ ನಾನು ಎಂದು ಹೇಳಿ, ಅಂತರ್ಜಾತೀಯ ವಿವಾಹವನ್ನೂ ಮಾಡಿಸಿ ಜಾತಿವಿನಾಶಕ್ಕೆ ಪ್ರಯತ್ನಪಟ್ಟ ವಿಶ್ವದ ಮೊತ್ತಮೊದಲ ಕಾರ್ಮಿಕ ನಾಯಕ ಬಸವಣ್ಣ. ಹಾಗಾಗಿಶರಣ ಸಂಸ್ಕೃತಿಯೆಂದರೆ ಮತ್ತೇನಲ್ಲ, ಅದು ಕಾಯಕ ಸಂಸ್ಕೃತಿ.

ಹದಿನಾಲ್ಕನೇ ಶತಮಾನದಲ್ಲಿ ಆರಂಭವಾದ ಇಂಗ್ಲಿಷ್ ಸಾಹಿತ್ಯ ಹದಿನೆಂಟನೇ ಶತಮಾನದ ಹೊತ್ತಿಗೆ ಇಡೀ ಭಾರತಕ್ಕೆ ಗೊತ್ತಾಗಿತ್ತು. ಆದರೆ ಭಾರತದಲ್ಲೇ ಅದಕ್ಕಿಂತ ಇನ್ನೂರು ವರ್ಷ ಮೊದಲೇ ಸ್ವಯಂಪೂರ್ಣ ಸ್ಥಿತಿಯಲ್ಲಿ ಸಂಭವಿಸಿದ್ದ ವಚನಕಾರರ ಚಳವಳಿಯು ಉತ್ತರಕ್ಕೂ ಹಬ್ಬಿರಲಿಲ್ಲ. ಹಾಗಾಗಿದ್ದರೆ ಗಾಂಧಿ ಮತ್ತು ಅಂಬೇಡ್ಕರ್ ಅವರ ಮೇಲೆ ಅದರ ಪರಿಣಾಮ ಹೇಗಾಗಿರುತ್ತಿತ್ತೋ? ಇರಲಿ, ನಮ್ಮ ವರ್ತಮಾನದ ಹಲವು ತಲ್ಲಣಗಳಿಗೆ ನಿಸ್ಸಂಶಯವಾಗಿಯೂ ಬಸವಮಾರ್ಗದಲ್ಲಿ ಪರಿಹಾರಗಳಿವೆ. ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವು ದೆಂಬ ಮಾತಲ್ಲಿ ನನಗಂತೂ ಎಳ್ಳಷ್ಟೂ ಉತ್ಪ್ರೇಕ್ಷೆ ಕಂಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.