ADVERTISEMENT

‘ಅಕ್ವಾ ಗಾರ್ಡನಿಂಗ್’ ಮಾಡಿ ನೋಡಿ

ಹರವು ಸ್ಫೂರ್ತಿ
Published 26 ಜನವರಿ 2017, 19:30 IST
Last Updated 26 ಜನವರಿ 2017, 19:30 IST
‘ಅಕ್ವಾ ಗಾರ್ಡನಿಂಗ್’ ಮಾಡಿ ನೋಡಿ
‘ಅಕ್ವಾ ಗಾರ್ಡನಿಂಗ್’ ಮಾಡಿ ನೋಡಿ   

ಮಿಂಚುಳ್ಳಿಯಂತೆ ಸುಳಿದಾಡುವ ಮೀನು, ಸಣ್ಣ ಗಿಡಗಳು ಜೊತೆಜೊತೆಗೆ ಬೆಳೆದರೆ ನೋಡಲು ಇನ್ನೂ ಸುಂದರವಾಗಿರುತ್ತವೆ.  ನಗರ ಪ್ರದೇಶದಲ್ಲಿ ಹೂ ಕುಂಡದ ಬದಲು ಇಂಥ ಅಕ್ವೇರಿಯಂ ಜೊತೆ ಗಿಡ ಬೆಳೆಸುವುದು ಟ್ರೆಂಡ್ ಆಗಿದೆ. ಇದಕ್ಕೆ ‘ಅಕ್ವಾ ಗಾರ್ಡೆನಿಂಗ್’ ಎನ್ನುತ್ತಾರೆ.

ಈಚೆಗೆ ನಗರ ಪ್ರದೇಶದಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ  ಹೋಂ ಲ್ಯಾಂಡ್‌ಸ್ಕೇಪ್ ಇದು. ಒಳಾಂಗಣವಿರಲಿ ಅಥವಾ ಹಿತ್ತಲಿನ ಕೈತೋಟವಿರಲಿ, ಸ್ಥಳಾವಕಾಶ ಸಿಕ್ಕಂತೆ ಅಕ್ವಾ ಗಾರ್ಡನ್ ಮಾಡಬಹುದು. ಎಲ್ಲೆಂದರಲ್ಲಿ ಅಕ್ವಾ ಕುಂಡಗಳನ್ನು ಇಟ್ಟರೆ ಚೆಂದ ಕಾಣುವುದಿಲ್ಲ. ಅದಕ್ಕೆಂದೇ ಸೂಕ್ತ ಸ್ಥಳ, ಗಾಳಿ ಬೆಳಕು ಬೇಕು.

ಹೇಗೆ ಬೆಳೆಸುವುದು
ಒಂದು ಹೂಜಿಯಿಂದ ಹಿಡಿದು, ದೊಡ್ಡ ಕೊಳದವರೆಗೆ ಮೀನು ಸಾಕಬಹುದು. ಹಾಗೆಯೇ ಅದರೊಗಳಗೆ ಒಂದು ಗಿಡವನ್ನು ಬೆಳೆಸಬಹುದು. ಆದರೆ ಅದು ನೀರಿನಲ್ಲಿ ಬೆಳೆಯಬಹುದಾದ ಗಿಡವಾಗಿರಬೇಕು. ಕೆಲ ಗಿಡಗಳು ಬೇರು ಬಿಡಲು ಸ್ವಲ್ಪ ಕೆಸರು ಬೇಕಾಗುತ್ತದೆ. ಆದರೆ ಕೆಸರಿಗೆ ಎಲ್ಲ ಜಾತಿಯ ಮೀನುಗಳು ಹೊಂದಿ ಕೊಳ್ಳುವುದಿಲ್ಲ. ಈ ವಿರೋಧಾಭಾಸಗಳನ್ನು ಅರ್ಥ ಮಾಡಿಕೊಂಡೇ ಮೀನು ಹಾಗೂ ಗಿಡಗಳನ್ನು ಆಯ್ದುಕೊಳ್ಳಬೇಕು.

ಕಮಲದ ಕುಂಡ
ಕಮಲದ ಕುಂಡವಿದ್ದರೆ ಇದರೊಂದಿಗೆ ಗೋಲ್ಡ್‌ ಫಿಶ್ ಸಾಕಬಹುದು. ಸಣ್ಣ ಮರಿಗಳನ್ನು ಬಿಟ್ಟರೆ ಹೊಸ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುವುದು ಕಷ್ಟ. ಕೊಂಚ ಬೆಳೆದ ಮೀನುಗಳನ್ನು ಇಂಥ ಕುಂಡಗಳಿಗೆ ಬಿಟ್ಟರೆ ಚೆನ್ನಾಗಿ ಬೆಳೆಯುತ್ತವೆ, ಹೆಚ್ಚು ಕಾಲ ಬದುಕುತ್ತವೆ. ಮೀನುಗಳ ಮಲ–ಮೂತ್ರ ಗಿಡಕ್ಕೆ ಉತ್ತಮ ಗೊಬ್ಬರವೂ ಆಗುತ್ತದೆ. ತಾವರೆ ಹೂವಿಗೆ ಹೆಚ್ಚು ಬಿಸಿಲು ಬೇಕು. ಹೆಚ್ಚು ನೆರಳು ಇರುವ ಜಾಗದಲ್ಲಿ ತಾವರೆ ಗಿಡ ಚೆನ್ನಾಗಿ ಬೆಳೆಯುವುದಿಲ್ಲ.

ಅಕ್ವೇರಿಯಂನ ಚೌಕ ವಿನ್ಯಾಸದ ಪಾಟ್ ಈಗ ಹಳೆಯದಾಗಿದೆ. ಆಕ್ವಾ ಗಾರ್ಡೆನಿಂಗ್ ಉದ್ಯಮ ಬೆಳೆಯುತ್ತಿದ್ದಂತೆ ನವೀನ ವಿನ್ಯಾಸದ ಪಾಟ್‌ಗಳೂ ಮಾರುಕಟ್ಟೆಗೆ ಬಂದಿವೆ. ಆಕ್ವಾ ಗಾರ್ಡೆನಿಂಗ್‌ಗೆ ಗಾಜಿನ ಪಾಟ್‌ಗಳೇ ಹೆಚ್ಚು ಸೂಕ್ತ. ಹೂಜಿ, ಗೊಂಬೆ, ಮನೆಯಾಕಾರ ಗಾಜಿನ ಕುಂಡಗಳನ್ನು ಬಳಸಬಹುದು.

ಬೆಳೆಸಬಹುದಾದ ಗಿಡ, ಮೀನು
ಜಾವಾ ಮೊಸ್, ಡ್ವಾರ್ಫ್  ಬೇಬಿ ಟಿಯರ್ಸ್‌, ಡ್ವಾರ್ಫ್ ಹೇರ್‌ ಗ್ರಾಸ್, ಅಮೇಜಾನ್ ಸ್ವಾರ್ಡ್‌, ಜಾವಾ ಫರ್ನ್, ಪಿಗ್ಮಿ ಚೈನ್ ಸ್ವಾರ್ಡ್‌ ಹೀಗೆ ಹಲವು ನೀರಿನಲ್ಲಿ ಬೆಳೆಯುವ ಗಿಡಗಳನ್ನು ಅಕ್ವೇರಿಯಂ ಅಂಗಡಿಯಲ್ಲಿ ಖರೀದಿಸಬಹುದು.

ಮೀನಿನ ತಳಿಯಲ್ಲೂ ಗಿಡದೊಂದಿಗೆ ಹೊಂದಿಕೊಂಡು ಬೆಳೆಯುವ ಕಾರ್ಡಿನಲ್ ಟೆಟ್ರಾಸ್, ರೂಮ್ಯಟೆಟ್ರಾಸ್‌, ಅಲ್ಲಬಿನೊ ಎನೆಯುಸ್‌ ಕೊರ್ಯ್‌ ಕ್ಯಾಟ್ಸ್‌, ನಿಯಾನ್ ಬ್ಲೂ ಡ್ವಾರ್ಫ್‌ ಗೌರಾಮಿ ಮೀನು ಪ್ರಬೇಧಗಳನ್ನು ಬೆಳೆಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.