ADVERTISEMENT

ಗ್ರಾಹಕರ ವಿಶ್ವಾಸ ಮುಖ್ಯ

ವಿಶ್ವನಾಥ ಎಸ್.
Published 10 ನವೆಂಬರ್ 2016, 19:30 IST
Last Updated 10 ನವೆಂಬರ್ 2016, 19:30 IST
ಗ್ರಾಹಕರ ವಿಶ್ವಾಸ ಮುಖ್ಯ
ಗ್ರಾಹಕರ ವಿಶ್ವಾಸ ಮುಖ್ಯ   

ಒಂದು ನಿರ್ದಿಷ್ಟ ಯೋಜನೆ ಕೈಗೆತ್ತಿಕೊಂಡ ಮೇಲೆ ಅದನ್ನು ಕಾಲಮಿತಿಯೊಂದಿಗೆ ಪೂರ್ಣಗೊಳಿಸಿ ಗ್ರಾಹಕರಿಗೆ ಹಸ್ತಾಂತರಿಸುವ ಹೊಣೆಗಾರಿಕೆ ಬಿಲ್ಡರ್‌ ಮೇಲಿರುತ್ತದೆ. ಅದನ್ನು ವ್ಯವಸ್ಥಿತವಾಗಿ ನಿಭಾಯಿಸಿದರೆ ಮಾತ್ರವೇ ಗ್ರಾಹಕರ ವಿಶ್ವಾಸ ಉಳಿಸಿಕೊಂಡು ಮುನ್ನಡೆಯಲು ಸಾಧ್ಯ.

ಎಲ್ಲಾ ವಲಯಗಳಲ್ಲಿಯೂ ಸಮಸ್ಯೆ ಇದೆ. ಹಾಗೆಂದ ಮಾತ್ರಕ್ಕೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಬಾರದು. ರಿಯಲ್‌ ಎಸ್ಟೇಟ್‌ ಉದ್ಯಮವನ್ನು ಒಂದು ವೃತ್ತಿಯಾಗಿ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡುತ್ತಿರುವವರೂ ಇದ್ದಾರೆ. ನಿಗದಿತ ಅವಧಿಗೆ ಯೋಜನೆಯನ್ನು ಹಸ್ತಾಂತರಿಸಿ ಗ್ರಾಹಕರ ವಿಶ್ವಾಸವನ್ನೂ  ಗಳಿಸುತ್ತಿದ್ದಾರೆ ಎಂದು ಹೆಬಿಟೇಟ್‌   ವೆಂಚರ್ಸ್‌ ಸಂಸ್ಥೆಯ ಸಹಸಂಸ್ಥಾಪಕ ಭಾಸ್ಕರ್ ಟಿ. ನಾಗೇಂದ್ರಪ್ಪ ಹೇಳುತ್ತಾರೆ.

ನಮ್ಮ ಇತಿಮಿತಿ, ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಮುನ್ನಡೆದರೆ ಮಾತ್ರವೇ ಉತ್ತಮ ಪ್ರಗತಿ ಕಾಣಲು ಸಾಧ್ಯ. ವೈಟ್‌ಫೀಲ್ಡಿನ ಹೂಡಿ ವೃತ್ತದ ಬಳಿ  ಹೆಬಿಟೇಟ್‌ ವೆಂಚರ್ಸ್‌ ಸಂಸ್ಥೆಯ ಈಡನ್‌ ಹೈಟ್ಸ್‌ ಎಂಬ ಯೋಜನೆ ನಿರ್ಮಾಣ ಹಂತದಲ್ಲಿದೆ. ಇದು ಇಪಿಐಪಿ/ಐಟಿಪಿ-ಬಿಗೆ ಕೇವಲ 2 ಕಿ.ಮೀಟರ್ ದೂರದಲ್ಲಿ ಉದ್ದೇಶಿತ ದೊಡ್ಡಾನೆಕುಂಟೆ ಮೆಟ್ರೊ ನಿಲ್ದಾಣಕ್ಕೆ ಸಮೀಪದಲ್ಲಿದೆ.

ಈ ಯೋಜನೆಯಲ್ಲಿ 1,398 ಚ. ಅಡಿಯಿಂದ 2,011 ಚ.ಅಡಿಯ 2.5ಬಿಎಚ್‌ಕೆ, 3 ಬಿಎಚ್‌ಕೆ, 3.5 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳಿವೆ. ಪ್ರತಿಷ್ಠಿತ ಐ.ಟಿ ಸೆಂಟರ್‌, ಶಾಲೆ, ಆಸ್ಪತ್ರೆ, ಮಾಲ್‌ಗಳು ಸಮೀಪದಲ್ಲಿವೆ. ಉತ್ಕೃಷ್ಟ ಮತ್ತು ಐಷಾರಾಮಿ ಜೀವನಾನುಭವ ನೀಡುತ್ತದೆ.

4.5 ಎಕರೆಯಷ್ಟು ವಿಸ್ತಾರವಾಗಿರುವ ಈ ಯೋಜನೆಯು ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಹೊಂದಿರುತ್ತದೆ. ಟಾಪ್ ಫ್ಲೋರಿನಲ್ಲಿ 15,000 ಚ. ಅಡಿಯು ‘ಸ್ಕೈ ಕ್ಲಬ್ ಹೌಸ್’ ಒಳಗೊಂಡಿದೆ.

ಯೋಜನೆ ಕುರಿತು ಮಾಹಿತಿ ನೀಡಿದ ಹೆಬಿಟೇಟ್‌ನ ಸಹಸಂಸ್ಥಾಪಕ  ಶಿವರಾಂ ಕುಮಾರ್ ಮಲಕ, ವೈಟ್‌ಫೀಲ್ಡಿನಂತಹ ಪ್ರಮುಖ ತಂತ್ರಜ್ಞಾನ ಕೇಂದ್ರಗಳಲ್ಲಿ ಜಾಗತಿಕ ಅನುಭವ ಮತ್ತು ಇಂದಿನ ಜೀವನಶೈಲಿಗೆ ಹೊಂದುವ ಮನೆಗಳನ್ನು ಬಯಸುತ್ತಿರುವವರನ್ನು ಗಮನದಲ್ಲಿರಿಸಿಕೊಂಡು ‘ಹೆಬಿಟೇಟ್‌ ಈಡನ್ ಹೈಟ್ಸ್’ ವಿನ್ಯಾಸಗೊಳಿಸಲಾಗಿದೆ ಎಂದರು.

ಯೋಜನೆಯ ವಿನ್ಯಾಸದ ಕುರಿತು ಮಾತನಾಡಿದ ಹೆಬಿಟೇಟ್‌ನ ಸಹಸಂಸ್ಥಾಪಕರು ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಟಿ.ನಾಗೇಂದ್ರಪ್ಪ, ನೈಸರ್ಗಿಕ ಬೆಳಕು ದೊರೆಯುವಂತೆ ವಾಸ್ತು ಪ್ರಕಾರ ನಿರ್ಮಿಸಲಾಗಿದೆ. ನಾವು ಟಾಟಾ ಸ್ಟೀಲ್, ಪೊರೋದರ್ಮ್ ಬ್ರಿಕ್ಸ್ ಬಳಕೆ ಮಾಡುತ್ತಿದ್ದೇವೆ ಎಂದರು.
ಹೂಡಿಕೆ

ಪಿರಾಮಿಲ್‌ ಕಂಪೆನಿಯು ಸಾಲ ಮತ್ತು ಷೇರುಗಳ ರೂಪದಲ್ಲಿ ಹೆಬಿಟೇಟ್‌ ಈಡನ್ ಹೈಟ್ಸ್‌ನ ಮೂರು ಯೋಜನೆಗಳಿಗೆ ಒಟ್ಟು ₹100 ಕೋಟಿ ಹೂಡಿಕೆ ಮಾಡಿದೆ.

ಸೌಲಭ್ಯಗಳು
*ಬಾಸ್ಕೆಟ್ ಬಾಲ್ ಕೋರ್ಟ್
*ಟೆನಿಸ್ ಕೋರ್ಟ್
*ಹಸಿರಾದ ಗಾಲ್ಫ್ ಮೈದಾನ
*2 ಬ್ಯಾಡ್ಮಿಂಟನ್ ಕೋರ್ಟ್‌ಗಳು
*ಆಂಫಿಥಿಯೇಟರ್
*ಮಕ್ಕಳ ಆಟದ ಏರಿಯಾ
*ವಾಕಿಂಗ್ ಮತ್ತು ಸೈಕ್ಲಿಂಗ್ ದಾರಿಗಳು
*ಈಜುಕೊಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT