ADVERTISEMENT

ಬದಲಾದ ಬ್ರೋಕರ್‌ ಭಾಷ್ಯ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2017, 19:30 IST
Last Updated 27 ಏಪ್ರಿಲ್ 2017, 19:30 IST
ಬದಲಾದ ಬ್ರೋಕರ್‌ ಭಾಷ್ಯ
ಬದಲಾದ ಬ್ರೋಕರ್‌ ಭಾಷ್ಯ   
ಬಹು ಆಕರ್ಷಣೆಯ ಸ್ಥಳ ಬೆಂಗಳೂರು. ಶಿಕ್ಷಣ, ಕೆಲಸದ ನಿಮಿತ್ತ ಹಳ್ಳಿಗಳಿಂದ ಹಾಗೂ ಇತರ ನಗರ ಪ್ರದೇಶಗಳಿಂದ ಬೆಂಗಳೂರಿಗೆ ಬರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 
 
ಹೀಗೆ ಜನರ ಪ್ರವೇಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಬೇಡಿಕೆ ಕುದುರಿದೆ. ಅನೇಕರು ನಿವೇಶನ ಕೊಂಡುಕೊಂಡು, ಮನೆ ಕಟ್ಟಿಸುವ ಸಾಹಸ ಮಾಡಿದರೆ ಕೆಲವರು ಅಪಾರ್ಟ್‌ಮೆಂಟ್‌ ಸಾಕು ಎನ್ನುತ್ತಾರೆ. ಆದರೆ ಹೆಚ್ಚಿನವರು ನೆಚ್ಚಿಕೊಂಡಿದ್ದು ಬಾಡಿಗೆ ಮನೆಗಳನ್ನೇ. ಇದನ್ನೇ ಬಂಡವಾಳವಾಗಿಸಿಕೊಂಡ ನೆಸ್ಟ್‌ಅವೇ ಕಂಪೆನಿ ಬೆಂಗಳೂರಿಗೆ ಬರುವವರಿಗೆ ಬಾಡಿಗೆ ಮನೆ ಕೊಡಿಸುವ ಜವಾಬ್ದಾರಿ ಹೊತ್ತುಕೊಂಡಿದೆ. 
 
ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುವ ನೆಸ್ಟ್‌ಅವೇ ದಾಖಲೆ ಪತ್ರ, ಬಾಡಿಗೆ ಹೋದ ನಂತರ ಮನೆಯಲ್ಲಿ ಸಮಸ್ಯೆ ಉಂಟಾದರೆ ರಿಪೇರಿ ಮಾಡುವವರನ್ನು ಕಳುಹಿಸುವುದು ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ತಾನೇ ವಹಿಸಿಕೊಂಡಿತು. ಇದರಿಂದ ಬಾಡಿಗೆದಾರ ಹಾಗೂ ಮಾಲೀಕರಿಗೆ ಅನುಕೂಲವಾಯಿತು. 
 
ಹೀಗೆ ಕೆಲಸವನ್ನು ಸಲೀಸು ಮಾಡಿದ ನೆಸ್ಟ್‌ಅವೇ ಬ್ರೋಕರ್‌ಗಳಿಗೂ ಉದ್ಯೋಗಾವಕಾಶ ನೀಡಿದೆ.  ಮಾಲೀಕರಿಂದ ಹಾಗೂ ಬಾಡಿಗೆದಾರರಿಂದಲೂ ಹಣಕೀಳುವ ಬ್ರೋಕರ್‌ಗಳ ಬಗೆಗೆ ಜನರ ಮೇಲೆ ತಿರಸ್ಕಾರ ಹೆಚ್ಚಿದ್ದರಿಂದ ನೆಸ್ಟ್‌ಅವೇ ಅದೇ ಕೆಲಸ ಮಾಡುವವರಿಗೆ ‘ಅಫಿಲಿಯೇಟ್‌ ಪಾರ್ಟ್‌ನರ್ಸ್‌’ ಎಂಬ ಹೊಸ ಹೆಸರನ್ನು ನೀಡಿತು. 
 
ಇದೇ ಕೆಲಸವನ್ನು ನೆಚ್ಚಿಕೊಂಡ ಸುಮಾರು 170 ಸಿಬ್ಬಂದಿ ನೆಸ್ಟ್‌ಅವೇಗಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸ ಹೆಚ್ಚು ಕಮ್ಮಿ ದೂರವಾಣಿ ಮೂಲಕವೇ ನಡೆಯುತ್ತದೆ. ವಾರದಲ್ಲಿ ಮೂರು ದಿನ ಚೆನ್ನಾಗಿ ಕೆಲಸ ಮಾಡಿದರೆ ಸಾಕು. ಕೆಲವೊಮ್ಮೆ ಫೀಲ್ಡ್‌ ವಿಸಿಟ್‌ ಇರುತ್ತದೆ. ಮನೆಯಲ್ಲೇ ಕುಳಿತು ಮಾಡುವ ಕೆಲಸದ ಆಧಾರದ ಮೇಲೆ ತಿಂಗಳಿಗೆ ಒಂದು ಲಕ್ಷ ರೂಪಾಯಿವರೆಗೂ ದುಡಿಯಬಹುದಂತೆ.  ನೆಸ್ಟ್‌ಅವೇ ಸಂಪರ್ಕಕ್ಕೆ: 07676760000
***
ಖುಷಿ ಇದೆ
ಓದಿದ್ದು ಏಳನೇ ತರಗತಿ. ಕ್ಯಾಬ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ಎಷ್ಟು ದುಡಿದರೂ ಮನೆ ನಿರ್ವಹಿಸುವುದು ಕಷ್ಟ ಎನಿಸುತ್ತಿತ್ತು. ಅದೇ ಸಂದರ್ಭದಲ್ಲಿ ನೆಸ್ಟ್‌ಅವೇ ಕೆಲಸದ ಬಗೆಗೆ ತಿಳಿಯಿತು. ಈಗ ತಿಂಗಳಿಗೆ ನಲವತ್ತರಿಂದ 70 ಸಾವಿರದವರೆಗೂ ಸಂಪಾದನೆ ಇದೆ.  ತುಸು ಓಡಾಡಬೇಕು, ಕರೆ ಮಾಡಿ ಗ್ರಾಹಕರ ಮನವೊಲಿಸಬೇಕು. ಇಷ್ಟೆಲ್ಲಾ ಮಾಡಿಯೂ ಮನೆಮಂದಿಗೆ ಸಮಯ ಕೊಡಲು ಸಾಧ್ಯವಾಗುತ್ತಿದೆ.
ಅನಿಲ್‌ ಕುಮಾರ್‌

ಮೂರೇ ದಿನ ನಾನು ಬ್ಯೂಸಿ

ಬಿಕಾಂ ಓದಿದ್ದು. ಏಳು ತಿಂಗಳ ಮಗುವನ್ನು ಬೇಬಿ ಸಿಟ್ಟಿಂಗ್‌ನಲ್ಲಿ ಬಿಡುತ್ತಿದ್ದೆ. ಕೆಲಸದ ಅನಿವಾರ್ಯ ಇತ್ತು. 22 ಸಾವಿರ ಸಂಬಳ ಬರುತ್ತಿತ್ತು. ಸೋಮವಾರದಿಂದ ಶನಿವಾರ ಕೈತುಂಬ ಕೆಲಸ. ಯಾಕಪ್ಪಾ ದುಡೀಬೇಕು ಅನಿಸ್ತಿತ್ತು. ಆಗ ನೆಸ್ಟ್‌ ಅವೇ ಬಗೆಗೆ ತಿಳಿಯಿತು. ಎಂಎನ್‌ಸಿ ಕೆಲಸ ಮಾಡುತ್ತಲೇ ನೆಸ್ಟ್‌ಅವೇ ಕೆಲಸವನ್ನೂ ಮಾಡಿದೆ. ಸಂಪಾದನೆ ಚೆನ್ನಾಗಿದೆ ಎಂದು ಖಾತರಿ ಆದಮೇಲೆ ಕೆಲಸ ಬಿಟ್ಟೆ. ವಾರದಲ್ಲಿ ಮೂರು ದಿನ ಕೆಲಸ. ತಿಂಗಳಿಗೆ ಏನಿಲ್ಲ ಎಂದರೂ ಒಂದು ಲಕ್ಷ ರೂಪಾಯಿ ದುಡಿಯುತ್ತಿದ್ದೇನೆ. 
ನಿಖಿತಾ
 
ಆಸಕ್ತಿ ಇತ್ತು
ಬಿಬಿಎಂ ಮಾಡಿದ್ದೀನಿ. ಈಗ ಸಿಎಸ್‌ಎ ಕರೆಸ್ಪಾಂಡೆನ್ಸ್‌ ನಲ್ಲಿ ಮಾಡ್ತಿದೀನಿ. ಫಿನಾನ್ಶಿಯಲ್‌ ಅನಾಲಿಸ್ಟ್‌ ಆಗಿ ಎಂಎನ್‌ಸಿ ಕಂಪೆನಿಯೊಂದರಲ್ಲಿ ನಾಲ್ಕು ವರ್ಷ ಇದ್ದೆ. ಕಾಲೇಜು ದಿನಗಳಿಂದಲೂ ರಿಯಲ್‌ ಎಸ್ಟೇಟ್‌ ಬಗ್ಗೆ ಆಸಕ್ತಿ ಇತ್ತು. ಹೀಗಾಗಿ ನೆಸ್ಟ್‌ಅವೇಗೆ ಸೇರಿದೆ.  ಆನ್‌ಲೈನ್‌ನಲ್ಲೇ ಹೆಚ್ಚಿನ ವ್ಯವಹಾರ. ಕೆಲವೊಮ್ಮೆ ಫೋನ್‌ ಮಾಡಿ ಮಾತನಾಡಬೇಕಾಗುತ್ತದೆ. ಎಂಎನ್‌ಸಿಯಲ್ಲಿ ₹40 ಸಾವಿರ ಸಂಬಳ ಇತ್ತು. ಈಗ ಮೂರುಪಟ್ಟು ಜಾಸ್ತಿ  ದುಡಿಯುತ್ತಿದ್ದೇನೆ. ದುಡಿಮೆಗಿಲ್ಲಿ ಮಿತಿ ಇಲ್ಲ.  
ವೆಂಕಟಾದ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.