ADVERTISEMENT

ಮಣ್ಣಿಲ್ಲದೇ ಗಿಡ ಬೆಳೆಯಿರಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಮಣ್ಣಿಲ್ಲದೇ ಗಿಡ ಬೆಳೆಯಿರಿ
ಮಣ್ಣಿಲ್ಲದೇ ಗಿಡ ಬೆಳೆಯಿರಿ   

ಹೈಡ್ರೋಫೋನಿಕ್ಸ್ ತಂತ್ರಜ್ಞಾನದಿಂದ ಮಣ್ಣಿಲ್ಲದೇ ಗಿಡಗಳನ್ನು ಬೆಳೆಯಲು ಸಾಧ್ಯ. ಮಣ್ಣಿನ ಬದಲಿಗೆ ಅವಶ್ಯ ಪೋಷಕಾಂಶಗಳ ದ್ರಾವಣ ನೀಡಿ ಗಿಡಗಳನ್ನು ಬೆಳೆಯಬಹುದು.

ಈ ವಿಧಾನದಲ್ಲಿ ಗಿಡಗಳನ್ನು ಬೆಳೆಯಲು ಚೆನ್ನಾಗಿ ಬಿಸಿಲು ಬೀಳುವ 2 ಚದರ ಅಡಿ ಜಾಗ, ಒಂದು ಪ್ಲಾಸ್ಟಿಕ್ ಡ್ರಮ್, ಪಿ.ವಿ.ಸಿ ಪೈಪ್ ತುಂಡುಗಳು, ನೀರು ಕುಡಿಯಲು ಬಳಸುವ ಪ್ಲಾಸ್ಟಿಕ್ ಲೋಟಗಳು, ಎಂ ಸೀಲ್, 25 ಲೀಟರ್ ನೀರು, ಸ್ವಲ್ಪ ಭತ್ತದ ಹುಲ್ಲು ಅಥವಾ ಈರುಳ್ಳಿ ಚೀಲ ಬೇಕು.

ಮನೆಯ ಮೂಲೆಯಲ್ಲೋ, ಬಾಲ್ಕನಿಯ ಸಣ್ಣ ಜಾಗದಲ್ಲೋ ಪಿವಿಸಿ ಪೈಪ್‌ಗಳನ್ನು ಬಳಸಿಯೂ ಹೈಡ್ರೋಫೋನಿಕ್ಸ್ ವಿಧಾನದಲ್ಲಿ ಗಿಡಗಳನ್ನು ಬೆಳೆಯಬಹುದು.

ADVERTISEMENT

* ಮನೆಯ ತಾರಸಿ ಮೇಲೆ ಪ್ಲಾಸ್ಟಿಕ್ ಡ್ರಮ್‌ಗಳನ್ನಿಟ್ಟು, ಅದರ ಮೇಲೆ ಲೋಟದ ಅಗಲದ ರಂಧ್ರ ಮಾಡಿ, 45 ಡಿಗ್ರಿ ಓರೆಯಲ್ಲಿ ಕೊರೆದ ಪಿವಿಸಿ ಪೈಪ್‌ ತುಂಡುಗಳನ್ನು ಕೂಡಿಸಿ

* ಪ್ಲಾಸ್ಟಿಕ್ ಲೋಟಗಳಿಗೆ 9 ರಂಧ್ರ ಕೊರೆದು ಕೊಂಚ ಭತ್ತದ ಹುಲ್ಲು ತುಂಬಿ ರಂಧ್ರದೊಳಗೆ ಸೇರಿಸಿ ಗಿಡ ಇಡಿ. ಕಾಯರ್‌ಪಿಟ್‌ (ತೆಂಗಿನನಾರಿನ ಪುಡಿ) ಸಿದ್ಧಪಡಿಸಿಕೊಂಡು ಡ್ರಮ್‌ಗೆ ಸೇರಿಸಿ

* ಡ್ರಮ್‌ನ ಮುಚ್ಚಳದ ಮಧ್ಯಭಾಗದಲ್ಲೊಂದು ರಂಧ್ರ ಕೊರೆದು ತಳದಿಂದ ಪೈಪ್‌ ಅಳವಡಿಸಿ ಮೋಟರ್ ಜೋಡಿಸಬೇಕು. ಮುಚ್ಚಳದ ಸುತ್ತಲೂ ಸಾಕಷ್ಟು (4-5) ಸಣ್ಣಸಣ್ಣ ರಂಧ್ರಗಳನ್ನು ಕೊರೆಯಬೇಕು

* ಪ್ರತಿ ಗಂಟೆಗೊಮ್ಮೆ 5 ನಿಮಿಷ ಗಿಡಗಳ ಬುಡ ನೆನೆಯುವಂತೆ ನೀರು ಹನಿಸಿದರೆ ಸಾಕು. ಸಮಯಕ್ಕೆ ಸರಿಯಾಗಿ ಮೋಟರ್ ಚಾಲು ಆಗುವಂತೆ ಟೈಮರ್ ಬಳಸಬಹುದು

* ಗಿಡಗಳಿಗೆ ಬೇಕಾದ ಅವಶ್ಯಕ ಪೋಷಕಾಂಶಗಳಿಗಾಗಿ 50 ಗ್ರಾಂ ಸೆಗಣಿ, 50 ಮಿ.ಲೀ ಗಂಜಲ, 20 ಗ್ರಾಂ ಕರಿ ಬೆಲ್ಲದ ಪುಡಿ, 20 ಗ್ರಾಂ ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ, 3 ದಿನ ಬಿಟ್ಟು 4 ಲೀಟರ್ ನೀರಿಗೆ ಬೆರೆಸಿ ಒಂದು ವಾರದಲ್ಲಿ ಒಟ್ಟಾರೆ 100 ಮಿ.ಲೀ ನಂತೆ ಡ್ರಮ್‌ಗೆ ಸೇರಿಸಿ

* ಕೆಲವು ಅಂಗಡಿಗಳಲ್ಲಿ ಸಿದ್ಧಪಡಿಸಿದ ರೆಡಿಮೇಡ್ (ಸಾವಯವ) ಸಸ್ಯ ಪೋಷಕಾಂಶಗಳನ್ನು ಮಾರುತ್ತಾರೆ. ಅವನ್ನೂ ಬಳಸಬಹುದು

* ಗಿಡಗಳ ಮೇಲೆ ಸ್ವಲ್ಪ ಕಾಲವಾದರೂ ಬಿಸಿಲು ಬೀಳುವಂತೆ ಎಚ್ಚರವಹಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.