ADVERTISEMENT

ಯಶಸ್ಸು ತಂದ ನೆಲೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2017, 19:30 IST
Last Updated 15 ಜೂನ್ 2017, 19:30 IST
ನಮ್ಮ ಮನೆಯ ಹೆಸರು ಯಶಸ್ವಿನಿ.
ನಮ್ಮ ಮನೆಯ ಹೆಸರು ಯಶಸ್ವಿನಿ.   

ನಮ್ಮ ಮನೆಯ ಹೆಸರು ಯಶಸ್ವಿನಿ. ಬದುಕಿನಲ್ಲಿ ಯಾವಾಗಲೂ ಯಶಸ್ಸು ದೊರಕಬೇಕು ಎಂಬ ಕಾರಣಕ್ಕೆ ಮನೆಗೆ ಈ ಹೆಸರು ಇಟ್ಟಿದ್ದೇವೆ. ತುಂಬಾ ಕಷ್ಟಗಳ ದಿನಗಳನ್ನು  ನೋಡಿದ್ದೇವೆ. ಆದರೂ ಆ ಸಮಯದಲ್ಲಿಯೂ ಅತಿಥಿಗಳು ಮನೆಗೆ ಬಂದಾಗ ಆದರದ ಸತ್ಕಾರ ಮಾಡುತ್ತಿದ್ದೆವು.

ಒಮ್ಮೆ ನನ್ನ ತಂದೆ ಮನೆಗೆ ಬಂದಿದ್ದರು. ಆಗ ಅವರನ್ನು ನೋಡಲು ಸಾಕಷ್ಟು ಮಂದಿ ಮನೆಗೆ ಬರುತ್ತಿದ್ದರು. ಬಡತನದಲ್ಲಿಯೂ ಅವರನ್ನು ಸತ್ಕರಿಸುತ್ತಿದ್ದ ರೀತಿಯನ್ನು ಕಂಡ ಅಪ್ಪ, ದೇವರು ನಿಮಗೆ ಅನುಕೂಲ ಕೊಡಲಿ, ಯಶಸ್ಸು ನಿಮ್ಮದಾಗಲಿ ಎಂದು ಹರಸಿದರು. ಇದಾದ ಸ್ವಲ್ಪ ದಿನಗಳಲ್ಲಿಯೇ ದೇವಯ್ಯ ಪಾರ್ಕಿನಲ್ಲಿ ಮನೆಯನ್ನು ನಿರ್ಮಿಸಿದೆವು.  ತಂದೆಯ ಹಾರೈಕೆ ಫಲಿಸಿದ ಕಾರಣಕ್ಕೆ ಮನೆಗೆ ಈ ಹೆಸರು ಇರಿಸಿದ್ದೇವೆ.
–ಬಿ.ಕೆ. ಸೀತಾಲಕ್ಷ್ಮೀ, ದೇವಯ್ಯ ಪಾರ್ಕ್‌

***

ADVERTISEMENT

ಹೊಂಗೆಯ ನೆರಳಲ್ಲಿ
ನಮ್ಮನೆ ಹೆಸರು ‘ಹೊಂಗೆಮನೆ’. ಈ ಮನೆ ನಿರ್ಮಿಸಿ ಮೂರು ವರ್ಷವಾಗಿದೆ. ಮನೆ ಕಟ್ಟಿದ ಮೇಲೆ ಮನೆಗೆ ಏನೆಂದು ಹೆಸರಿಡುವುದು ಎಂಬ ಚರ್ಚೆ ನಡೆಯಿತು.

ಆಗ ದೇವರ ದಯೆ ಇರಲಿ ಎಂಬ ಕಾರಣಕ್ಕೆ ನಮ್ಮ ಮನೆ ದೇವರ ಹೆಸರಾದ ಹೊಂಗೇ ಲಕ್ಷ್ಮಿಯ ಹೆಸರಿಡುವ ಎಂದು ಯೋಚಿಸಿದೆವು. ಆದರೆ ನಂತರ ಎಲ್ಲರ ಸಹಮತದಿಂದ ಹೊಂಗೆ ಮನೆ ಎಂಬ ಹೆಸರಿಟ್ಟಿದ್ದೇವೆ. ಇದರಲ್ಲಿ ದೇವರ ಜೊತೆಗೆ ಹೊಂಗೆ ನೆರಳು ಎಂಬ ಅರ್ಥವೂ ಬರುವುದು ಈ ಹೆಸರಿಡಲು ಕಾರಣ. ಈ ಮನೆ ನಮಗೆ ತಂಪಾದ ಅನುಭೂತಿಯನ್ನೇ ನೀಡಿದೆ.
–ಶಶಿಧರ್‌, ಲಗ್ಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.