ADVERTISEMENT

ಶುಭ ತರುವ ಜೋಡಿ ಹಕ್ಕಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2017, 19:30 IST
Last Updated 29 ಜೂನ್ 2017, 19:30 IST
ಶುಭ ತರುವ ಜೋಡಿ ಹಕ್ಕಿ
ಶುಭ ತರುವ ಜೋಡಿ ಹಕ್ಕಿ   

ಹಕ್ಕಿಗಳ ಕಲರವ, ಅವುಗಳ ಅಂದಚಂದ ಸವಿಯುವುದು ಎಲ್ಲರಿಗೂ ಇಷ್ಟವೇ. ಮಕ್ಕಳಿಗೆ ಹಕ್ಕಿಗಳನ್ನು ನೋಡುವುದರಲ್ಲಿ ವಿಶೇಷ ಖುಷಿ ಇದೆ. ಹೀಗಾಗಿಯೇ ಮನೆಯಲ್ಲಿ ಜೋಡಿ ಹಕ್ಕಿಗಳಿರುವ ಚಿತ್ರ,  ಕಲಾಕೃತಿಗಳನ್ನು ಇಟ್ಟುಕೊಳ್ಳುವುದು ಸಾಮಾನ್ಯ. ವಾಸ್ತು ಪ್ರಕಾರ ಮನೆಗೂ ಹಕ್ಕಿಗೂ ವಿಶೇಷವಾದ ಸಂಬಂಧವಿದೆ.

ಚೀನಾದ ಫೆಂಗ್‌ ಶುಯಿ ವಾಸ್ತು ಹಾಗೂ ಭಾರತೀಯ ವಾಸ್ತು ಶಾಸ್ತ್ರದಲ್ಲಿ ಹಕ್ಕಿಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ.

* ಹಕ್ಕಿಗಳು ಮನೆಗೆ ಬರುವುದು, ಗೂಡು ಕಟ್ಟುವುದು, ಮರಿ ಹಾಕುವುದು ಎಂದರೆ ಶುಭ ಸಂಕೇತ.
* ವಾಸ್ತುಶಾಸ್ತ್ರದಲ್ಲಿ ಪಾರಿವಾಳಕ್ಕೆ ಹೆಚ್ಚಿನ ಪ್ರಾಧಾನ್ಯವಿದೆ. ಅವುಗಳನ್ನು ಓಡಿಸುವುದು ಒಳಿತಲ್ಲ ಎನ್ನುವ ನಂಬಿಕೆ ಅನೇಕರದ್ದು.
* ಮದುವೆ ಆಗದೇ ಇದ್ದಲ್ಲಿ ಪ್ರಣಯ ಹಕ್ಕಿಗಳನ್ನು ಇಟ್ಟರೆ ಮದುವೆ ಆಗುತ್ತದೆಯಂತೆ.
* ಲವ್‌ ಬರ್ಡ್ಸ್‌, ಬಾತುಕೋಳಿ ಅಥವಾ ಯಾವುದೇ ಜಾತಿಯ ಜೋಡಿ ಹಕ್ಕಿಗಳ ಚಿತ್ರ, ಪ್ರತಿಕೃತಿಗಳನ್ನೂ ಮನೆಯಲ್ಲಿ ಇಟ್ಟುಕೊಂಡರೆ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಎನ್ನುವ ನಂಬಿಕೆ ಇದೆ.
* ಅಂದಹಾಗೆ ಜೋಡಿಹಕ್ಕಿಗಳನ್ನು ಮನೆಯ ನೈಋತ್ಯ ಭಾಗದಲ್ಲಿ ಇಡುವುದು ಉತ್ತಮ.

ADVERTISEMENT

ಫೆಂಗ್‌ಶುಯಿ ಹಕ್ಕಿಗಳು
ವಾಸ್ತು ಪ್ರಕಾರ ಫೆಗ್‌ಶುಯಿ ಹಕ್ಕಿಗಳು ಅದೃಷ್ಟ ತರುತ್ತವೆ. ಮನೆಯಲ್ಲಿ ಖುಷಿಯ ವಾತಾವರಣವನ್ನು ಹೆಚ್ಚಿಸುತ್ತದೆ. ಪ್ರೀತಿ ಹಾಗೂ ಬದ್ಧತೆಯ ಸಂಕೇತ ಇವು. ಹೊಸ ಹೊಸ ಅವಕಾಶಗಳನ್ನೂ  ಈ ಹಕ್ಕಿಗಳು ಹೊತ್ತು ತರುತ್ತವೆ ಎಂಬ ನಂಬಿಕೆಯೂ ಇದೆ.

* ಫೈರ್‌ಬರ್ಡ್‌ಗಳು ಶಕ್ತಿ ಹಾಗೂ ದೃಢತೆಯ ಸಂಕೇತ. ವೈವಾಹಿಕ ಜೀವನ ಸುಖಕರವಾಗಿರಲೆಂದು ಅನೇಕರು ಇದನ್ನು ಮನೆಯಲ್ಲಿಡುತ್ತಾರೆ. ಮುಖ್ಯದ್ವಾರದಲ್ಲಿ ಇವುಗಳನ್ನಿಟ್ಟರೆ ದುಷ್ಟಶಕ್ತಿಗಳು ಮನೆಪ್ರವೇಶಿಸದಂತೆ ತಡೆಯುತ್ತವೆ. 
* ಕ್ರೇನ್‌ಬರ್ಡ್‌ಗಳು ಸ್ವಚ್ಛ ಹಾಗೂ ಪರಿಶುದ್ಧತೆಯ ಸಂಕೇತ. ಪೀಚ್‌ ಹಾಗೂ ದೇವದಾರು ಮರ, ತಾವರೆ ಗಿಡದ ಚಿತ್ರವಿರುವ ಕ್ರೇನ್‌ಬರ್ಡ್‌ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷವನ್ನು ತರುತ್ತವೆ.
* ಮ್ಯಾಂಡರಿನ್‌ ಬಾತುಕೋಳಿಗಳ ಫೋಟೊ ಅಥವಾ ಪ್ರತಿಕೃತಿ ಮನೆಯಲ್ಲಿದ್ದರೆ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಇವುಗಳನ್ನು ಮನೆ ಅಥವಾ ಮಲಗುವ ಕೋಣೆಯ ನೈಋತ್ಯ ಭಾಗದಲ್ಲಿ ಇರಿಸಬೇಕು.
* ಜೋಡಿ ಪಾರಿವಾಳಗಳ ಪ್ರತಿಮೆಯನ್ನು ಮನೆಯಲ್ಲಿಟ್ಟರೆ ಶುಭ. ಅವು ಒಂದಕ್ಕೊಂದು ಎದುರು ಬದುರಾಗಿ ಕುಳಿತ ಪ್ರತಿಮೆ ಇರಲಿ. ಮಲಗುವ ಕೋಣೆಯ ನೈಋತ್ಯ ಭಾಗದಲ್ಲಿ ಸ್ಥಾಪಿಸಿ. ಕೋಣೆ ಪ್ರವೇಶಿಸಿದಾಗ ಹಾಗೂ ಕೋಣೆಯಿಂದ ಹೊರನಡೆಯುವಾಗ ಜೋಡಿ ಪಾರಿವಾಳಗಳ ಪ್ರತಿಮೆ ಕಣ್ಣಿಗೆ ಬೀಳುವಂತಿರಲಿ.
* ಶ್ರದ್ಧೆ, ಧೈರ್ಯ, ನಂಬಿಕೆ, ಪರಿಶ್ರಮದ ಸಂಕೇತವಾದ ಹುಂಜದ ಪ್ರತಿಮೆಯನ್ನೂ ಮನೆಯಲ್ಲಿಟ್ಟುಕೊಳ್ಳುವುದು ವಾಸ್ತು ಪ್ರಕಾರ ಒಳ್ಳೆಯದು.  ನವಿಲು ಪ್ರೀತಿ, ಸಮೃದ್ಧಿ, ಪರಿಶುದ್ಧತೆ, ನೆಮ್ಮದಿಯ ಸಮ್ಮಿಶ್ರಣದ ಸಂಕೇತ. ಖುಷಿ, ಯಶಸ್ಸು, ಪ್ರೀತಿ, ಅವಕಾಶಗಳನ್ನು ಹೊತ್ತು ತರುವ ನವಿಲಿನ ಪ್ರತಿಮೆಯನ್ನು ಮನೆ ಹಾಗೂ ಕಚೇರಿಯಲ್ಲಿ ಇಟ್ಟುಕೊಳ್ಳಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.