ADVERTISEMENT

ಚುರುಮುರಿ: ಇಡ್ಲಿ ಪುರಾಣ

ಚುರುಮುರಿ: ಇಡ್ಲಿ ಪುರಾಣ

ಪ್ರಜಾವಾಣಿ ವಿಶೇಷ
Published 17 ಏಪ್ರಿಲ್ 2024, 20:11 IST
Last Updated 17 ಏಪ್ರಿಲ್ 2024, 20:11 IST
<div class="paragraphs"><p>ಚುರುಮುರಿ: ಇಡ್ಲಿ ಪುರಾಣ</p></div>

ಚುರುಮುರಿ: ಇಡ್ಲಿ ಪುರಾಣ

   

‘ಮಲ್ಲಿಗೆ ಇಡ್ಲಿ ಗೊತ್ತು, ಮಲ್ಲಿಗೆ ದೋಸೆ ಕೇಳಿದ್ದೀರಾ?’ ಮಡದಿ ಕೇಳಿದಾಗ ‘ಇಲ್ಲ’ ಎಂದೆ.

‘ಮೈಸೂರಿನಲ್ಲಿ ಸಿಗುತ್ತಂತೆ’.

ADVERTISEMENT

‘ನೆಕ್ಸ್ಟ್ ಟೈಂ ಹೋದಾಗ ತಿಂದೇ ಬಿಡೋಣ’ ಎಂದು ಪ್ರಾಮಿಸ್ ಮಾಡಿದೆ.

‘ದೋಸೆಗಿಂತ ಇಡ್ಲೀನೆ ಹೆಚ್ಚು ಹೆಸರುವಾಸಿ ಅಲ್ಲವೆ? ದೋಸೇಲಿ ಎಷ್ಟು ವೆರೈಟಿ ಇದೆ ಮಹಾ? ಮಸಾಲೆ, ಸಾದಾ, ಸೆಟ್, ಈರುಳ್ಳಿ ಮಿಕ್ಸ್ ಮಾಡಿದರೆ ಈರುಳ್ಳಿ ದೋಸೆ, ರವೆ ಬೆರೆಸಿದರೆ ರವಾ ದೋಸೆ, ನೀರು ದೋಸೆ... ಮುಗೀತಲ್ಲ ಅದರ ಅವತಾರಗಳು’ ಎಂದಳು.

‘ಇಡ್ಲಿ ಅವತಾರಗಳು ಬಹಳಷ್ಟಿವೆ. ಮಲ್ಲಿಗೆ ಇಡ್ಲಿ, ಸಾದಾ ಇಡ್ಲಿ, ಮಸಾಲಾ ಇಡ್ಲಿ, ರವಾ ಇಡ್ಲಿ, ಪೋಡಿ ಇಡ್ಲಿ, ಕಾಂಚೀಪುರಂ ಇಡ್ಲಿ...’

‘ಕಾಂಚೀಪುರಂ ಸಿಲ್ಕ್ ಸೀರೆ ಗೊತ್ತು. ಇಡ್ಲಿ ಬೇರೆ ಇದೆಯೇನು?’

‘ಇದೆ. ತಟ್ಟೆ ಇಡ್ಲಿ, ಘೀ ಇಡ್ಲಿ, ಬಟನ್ ಇಡ್ಲಿ... ಖುಷ್ಬೂ ಇಡ್ಲಿ ಅಂತನೂ ಸಿಗುತ್ತಂತೆ
ಕೊಯಮತ್ತೂರಿನಲ್ಲಿ’.

‘ಖುಷ್ಬೂ? ಆಕೆ ಇಡ್ಲಿ ತರಹ ಇಲ್ಲವಲ್ಲ?’

‘ಅದೇನೋ ಆ ಹೆಸರು ಬಂದಿದೆ. ಅಂದಹಾಗೆ ಇಡ್ಲಿ ಎಲ್ಲಿ ಹೋದರೂ ಇಡ್ಲೀನೆ. ದೋಸೆ ಮಾತ್ರ ದೋಶೆ, ದೋಸಾ, ದೋಸೈ ಹೀಗೆ ಅನೇಕರ ಬಾಯಿಯಲ್ಲಿ ಸಿಕ್ಕಿ ನಲುಗಿದೆ’.

‘ಇರಬಹುದು. ಇದು ಗಮನಿಸಿದ್ದೀಯಾ? ಈ ಇಡ್ಲಿಯು ಉದ್ದಿನ ವಡೆ ಜತೆ ಮಾತ್ರ ಹೋಗುತ್ತೆ. ಇಡ್ಲಿ ವಡೆ ಅಂತಾನೇ ಆರ್ಡರ್ ಮಾಡ್ತಾರೆ ಹೋಟೆಲಿನಲ್ಲಿ, ಪೂರಿ ಸಾಗು ತರಹ. ಆದರೆ ಇಡ್ಲಿ ದೋಸೆ? ನೊ ನೊ’

‘ಅದೇನೊ ಅವರಿಬ್ಬರದೂ ಅವಿನಾಭಾವ ಸಂಬಂಧ’.

‘ದೋಸೆ ಭಾರತದ್ದೇ ಇರಬಹುದು, ಆದರೆ ಇಡ್ಲಿ ಫಾರಿನ್ ಮಾಲು’.

‘ಫಾರಿನ್?!’

‘ಅದು ಮೊದಲು ತಯಾರಾಗಿದ್ದು ಇಂಡೊನೇಷ್ಯಾದಲ್ಲಂತೆ. ಆಗ ಅದರ ಹೆಸರು ಇಡ್ಡಲಿಗೆ. ಕರ್ನಾಟಕಕ್ಕೆ ಬಂದ ಮೇಲೆ ಇಡ್ಲಿ ಆಯಿತು ಎನ್ನುತ್ತೆ ಇಡ್ಲಿ ಚರಿತ್ರೆ’.

‘ಆದರೆ ವಡೆ ನಮ್ಮದೇ. ಇಡ್ಲಿ ಜತೆ ಹೊಂದಿಕೊಂಡಿದೆ’.

‘ಸಾಕು, ನಿಮ್ಮ ಇಡ್ಲಿ ಪುರಾಣ. ಹೋಗಿ ತಟ್ಟೆ ಇಡ್ಲಿ ಪಾರ್ಸಲ್ ತನ್ನಿ. ಸಾಂಬಾರ್ ಮರೀಬೇಡಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.