ADVERTISEMENT

ಅರಿವಿನ ಪಾಠ ಆಗಲಿ

ರಮೇಶ್ ಮಾಳೇನಹಳ್ಳಿ ಶಂಕರಘಟ್ಟ
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST

1980-81ರಲ್ಲಿ ನಾನು 10ನೇ ತರಗತಿಯ­ಲ್ಲಿದ್ದೆ. ಒಮ್ಮೆ ಸಮಾಜ ಶಾಸ್ತ್ರದ ಶಿಕ್ಷಕಿ ಉಮಾ ಎಂಬು­ವವರು ‘I felt very happy’ ಎಂಬು­ದನ್ನು ಬಳಸಿ ವಾಕ್ಯ ರಚಿಸಲು ತಿಳಿಸಿದರು. ನಾನಾಗ ‘I felt very happy, when I heard that Indira Gandhi was assassinated’ ಎಂದು ಬರೆದೆ. ಇದನ್ನು ನೋಡಿದ ಮೇಡಂ ಕಾರಣ ಕೇಳಿದಾಗ, ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದೇ ಇಂದಿರಾ ಗಾಂಧಿ ಅವರ ಮೇಲಿನ ನನ್ನ ಕೋಪಕ್ಕೆ ಕಾರಣ ಎಂದು ಹೇಳಿದೆ.

ಮೇಡಂ, ನನಗಾಗ ಸಂಸ್ಕಾರದ ಪಾಠ ಹೇಳಿ­ಕೊಟ್ಟಿದ್ದರು. ಅಂದಿನಿಂದ ನನ್ನ ಕಡು ವೈರಿಯ ಅಂತ್ಯಸಂಸ್ಕಾರದಲ್ಲೂ ನಾನು ಹಾಜರಿರುತ್ತೇನೆ. ಆದರೆ ಈಗ ಸಾವಿನ ಸುದ್ದಿ ಕೇಳಿ ಪಟಾಕಿ ಸಿಡಿಸುವವರಿಗೆ  ಸಂಸ್ಕಾರದ ಪಾಠ ಹೇಳಿ­ಕೊಡುವ ಗುರುಗಳ ಕೊರತೆ ಇದೆ ಎನಿಸುತ್ತದೆ. ಅನಂತಮೂರ್ತಿ ಅವರ ವೈಚಾರಿಕತೆ ಬಗ್ಗೆ ನನಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದರೂ, ಅವರ ಸಾವು ನನಗೆ ನೋವು ತಂದಿದ್ದು ಸುಳ್ಳಲ್ಲ. ಅವರ ಅಂತ್ಯಸಂಸ್ಕಾರದ ಸಂಪೂರ್ಣ ದಿನಚರಿ ಮುಗಿ­ಯುವವರೆಗೂ ನಾನು ಟಿ.ವಿ. ಬಿಟ್ಟು ಕದಲಲಿಲ್ಲ.

ರಾಷ್ಟ್ರಕವಿ ಜಿ.ಎಸ್.ಎಸ್. ಮತ್ತು ಅನಂತ­ಮೂರ್ತಿ ಅವರ ಅಂತ್ಯಕ್ರಿಯೆ ನಡೆದ ಜಾಗದ ಬಗ್ಗೆಯೂ ನನ್ನ ವಿರೋಧವಿದೆ. ಜಿ.ಎಸ್.ಎಸ್. ಅವರ ಸಮಾಧಿಗೆ ಒದಗಿರುವ ದುಃಸ್ಥಿತಿ ನೋಡಿ ಸಂಕಟ ಆಗುತ್ತದೆ. ಅನಂತಮೂರ್ತಿ ಅವರ ಬಂಧು­ಗಳ ಪ್ರಕಾರ, ಅವರು ತಮ್ಮ ಅಂತ್ಯ­ಸಂಸ್ಕಾರ ಹುಟ್ಟೂರಿನಲ್ಲೇ ನಡೆಯಬೇಕೆಂದು ಬಯಸಿದ್ದರು. ಪ್ರತಿಯೊ­ಬ್ಬರಿಗೂ ತಮ್ಮ ಹುಟ್ಟೂ­ರಿನ ಬಗ್ಗೆ ಇದೇ ರೀತಿಯ ಒಲವು  ಇರುತ್ತದೆ. ಅನಂತಮೂರ್ತಿ ಅವರ ಅಭಿ­ಲಾಷೆಗೆ ವಿರುದ್ಧ­ವಾಗಿ ಕುಟುಂಬದವರು ಅವರ ಅಂತ್ಯಸಂಸ್ಕಾರ­ವನ್ನು ಕಲಾಗ್ರಾಮದಲ್ಲಿ ಶಾಸ್ತ್ರೋಕ್ತ­ವಾಗಿ ನೆರವೇರಿಸಿದ್ದಾರೆ. ಇದರಿಂದ ಅವರ ಆತ್ಮಕ್ಕೆ ನಿಜವಾಗಿಯೂ ಮೋಕ್ಷ ದೊರಕುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.