ADVERTISEMENT

ದೂರದರ್ಶಿತ್ವ ಇಲ್ಲ

ಡಾ.ಬಿ.ಆರ್.‌ ಸತ್ಯನಾರಾಯಣ
Published 25 ಆಗಸ್ಟ್ 2014, 19:30 IST
Last Updated 25 ಆಗಸ್ಟ್ 2014, 19:30 IST

ಜಿಎಸ್‌ಎಸ್‌ ಅವರ ಅಂತ್ಯಸಂಸ್ಕಾರ ಕಲಾ­ಗ್ರಾಮ­ದಲ್ಲಿ ನಡೆದಾಗಲೇ ನಾಡಿನ ಪ್ರಜ್ಞಾವಂತ­ರನ್ನು ಈ ಪ್ರಶ್ನೆ ಕಾಡಿತ್ತು. ಈಗ ಅನಂತಮೂರ್ತಿ ಅವರ ಅಂತ್ಯಸಂಸ್ಕಾರವೂ ಅಲ್ಲೇ ಕೇವಲ 25 ಅಡಿ ಅಂತರದಲ್ಲಿ ನಡೆದುಹೋಗಿದೆ. ಪ್ರಸನ್ನ ಅವರು ಹೇಳಿದಂತೆ ಇದು ಮುಂದೆ ಯಾವ್ಯಾವ ಆಯಾಮ ಪಡೆದುಕೊಳ್ಳುತ್ತದೋ ಎಂಬ ಆತಂಕ ಇದ್ದೇ ಇದೆ. ಸರ್ಕಾರ ಈ ವಿಷಯದಲ್ಲಿ ದುಡುಕಿದೆ.

ಇಂತಹ ಸಂದರ್ಭದಲ್ಲಿ ನಮಗೆ ಮತ್ತೆ ನೆನಪಾಗುವವರು ಹಾ.ಮಾ.ನಾಯಕ ಮತ್ತು ತೇಜಸ್ವಿ ಅವರು. ಮೈಸೂರಿನಲ್ಲಿ ಕುವೆಂಪು ನಿಧನ­ರಾ­ದಾಗ ಕೆಲವರು ಮಾನಸ ಗಂಗೋತ್ರಿಯಲ್ಲೇ ಅಂತ್ಯಸಂಸ್ಕಾರ ಆಗಬೇಕೆಂದು ಹಟ ಹಿಡಿದಿದ್ದ­ರಂತೆ. ಈ ವಿಷಯ  ತಿಳಿದ ತಕ್ಷಣ ಹಾ.ಮಾ.ನಾ ಅವರು ‘ಇಂದು ಕುವೆಂಪು ಅವರನ್ನು ಅಲ್ಲಿ ಮಲಗಿಸಿದರೆ ಮುಂದೆ ವಿಶ್ವವಿದ್ಯಾಲಯದ ಎಲ್ಲ ಕುಲಪತಿಗಳನ್ನೂ ಅಲ್ಲೇ ಮಲಗಿಸಬೇಕೆಂಬ ಬೇಡಿಕೆ ಬಂದರೂ ಬರಬಹುದು’ ಎಂದು ಎಚ್ಚರಿಸಿದ್ದರಂತೆ. ತೇಜಸ್ವಿ ಊರಿನಿಂದ ಬಂದಾಗ ಹಾ.ಮಾ.ನಾಯಕರ ಮಾತನ್ನು ಅನುಮೋದಿಸಿ, ಧರಣಿ ಕುಳಿತಿದ್ದವರಿಗೆ ಇದೇ ಮಾತನ್ನು ಹೇಳಿ­ದ್ದರಿಂದ ಗಂಗೋತ್ರಿ ಸ್ಮಶಾನ ಆಗುವುದು ತಪ್ಪಿತು.

ಕಲಾಗ್ರಾಮ ಎಂದು ಹೆಸರನ್ನಿಟ್ಟು ಅದನ್ನು ಸ್ಮಶಾನವನ್ನಾಗಿಸುವುದು ಎಷ್ಟು ಸರಿ? ಸರ್ಕಾರ­ಕ್ಕಂತೂ ದೂರಾಲೋಚನೆ ಇಲ್ಲ. ಆದರೆ ಇಂದಿನ ಸಾಂಸ್ಕೃತಿಕ ನಾಯಕರಿಗೆ, ಸಾಹಿತಿಗಳಿಗೆ ಹಾ.ಮಾ.­ನಾಯಕರ ದೂರದರ್ಶಿತ್ವ, ತೇಜಸ್ವಿ ಅವರ
ಕರ್ತೃ­ತ್ವಶಕ್ತಿ ಇಲ್ಲದಿರುವುದು ನಾಡಿನದೌರ್ಭಾ­ಗ್ಯವೇ ಸರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.