ADVERTISEMENT

ಗುರುವಾರ, 6–4–1967

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2017, 19:30 IST
Last Updated 5 ಏಪ್ರಿಲ್ 2017, 19:30 IST

ಜನ ನಂಬುಗೆ ಕಳೆದುಕೊಂಡ ಕಾಂಗ್ರೆಸ್ಸಿಗೆ ತರುಣ ರಕ್ತದ ಕಾಯಕಲ್ಪ ಅಗತ್ಯ: ಎಸ್ಸೆನ್
ಬೆಂಗಳೂರು, ಏ. 5–
‘ಜನರೊಡನಿರುವ ಸಂಪರ್ಕವನ್ನು ನಾವು ಕಳೆದುಕೊಂಡಿದ್ದೇವೆ. ಅವರ ಸಂಕಷ್ಟಗಳನ್ನು ನಿವಾರಿಸುವ ಮಾತಂತಿರಲಿ ಅವರ ಆಸೆ, ಆಶೋತ್ತರಗಳನ್ನು ಅರಿತುಕೊಳ್ಳುವ ಮಾರ್ಗವನ್ನೂ ಮರೆತಿದ್ದೇವೆ’.

ಮೈಸೂರಿನ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರ ಪ್ರಕಾರ ‘ರಾಷ್ಟ್ರದಲ್ಲಿ ಕಾಂಗ್ರೆಸ್ ವೈಫಲ್ಯಕ್ಕೆ ಕಾಂಗ್ರೆಸ್ ಸಂಸ್ಥೆಯಲ್ಲಿ ಜನರು ಕಾಣುತ್ತಿರುವ ಸೇವಾಭಾವನೆಯ ಅಭಾವ ಮುಖ್ಯ ಕಾರಣ’. ‘ಆದರ್ಶದ ಕೊರತೆ ಮತ್ತು ಸ್ವಾರ್ಥ ಮನೋಭಾವದ ಕಾಂಗ್ರೆಸ್ಸಿಗರಿಂದಾಗಿ ಉತ್ತರ ಪ್ರದೇಶ, ಹರಿಯಾನ ಮುಂತಾದವುಗಳಲ್ಲಿ ಕಾಂಗ್ರೆಸ್ ಸರ್ಕಾರದ ಪತನವಾಯಿತು’ ಎಂದರು.

ದಂಡನಾಯಕರ ಸಮ್ಮೇಳನ
ನವದೆಹಲಿ, ಏ. 5–
ಜ. ಪಿ.ಪಿ. ಕುಮಾರಮಂಗಳಂ ಅವರ ಅಧ್ಯಕ್ಷತೆಯಲ್ಲಿ ಸೇನಾ ದಂಡನಾಯಕರ ನಾಲ್ಕು ದಿನಗಳ ಸಮ್ಮೇಳನ ಇಂದು ಇಲ್ಲಿ ಆರಂಭವಾಯಿತು.

ADVERTISEMENT

ಬೆಳಿಗ್ಗೆ ರಕ್ಷಣಾ ಸಚಿವರೂ, ಸಂಜೆ ಪ್ರಧಾನ ಮಂತ್ರಿಯವರೂ ದಂಡನಾಯಕರನ್ನು ಉದ್ದೇಶಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ವಿದೇಶಿ ವಿನಿಮಯ ಸೌಲಭ್ಯ: ನಿಯಮ ಬದಲಾವಣೆ
ಮುಂಬೈ, ಏ. 5–
1967–68ನೇ ಶಾಲಾ ವರ್ಷದಲ್ಲಿ ಉನ್ನತ ವ್ಯಾಸಂಗಕ್ಕೆ ವಿದೇಶಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ವಿದೇಶೀ ವಿನಿಮಯ ನಿಬಂಧನೆಗಳಲ್ಲಿ ಭಾರತದ ರಿಸರ್ವ್ ಬ್ಯಾಂಕ್ ಇಂದು ಕೆಲವು ಬದಲಾವಣೆಗಳನ್ನು ಪ್ರಕಟಿಸಿತು. ಮಾರ್ಪಾಟಿನಂತೆ ವಿದೇಶದಲ್ಲಿ ಎಂಜಿನಿಯರಿಂಗ್ ಪದವಿ ಪಡೆಯುವವರು ಭಾರತದ ಯಾವುದೇ ವಿ.ವಿದ ಪದವಿಯಲ್ಲಿ ಶೇ 55 ಕ್ಕಿಂತ ಹೆಚ್ಚು ಅಂಕ ಪಡೆದಿದ್ದರೆ ಮಾತ್ರ ವಿದೇಶೀ ವಿನಿಯಮ ಸೌಲಭ್ಯ ಲಭ್ಯ. ಯಾವುದೇ ವಿ.ವಿ ಅಥವಾ ಸಂಸ್ಥೆಗಳ ತಾರತಮ್ಯವಿಲ್ಲದೆ ಏಕ ರೀತಿಯಲ್ಲಿ ಜಾರಿಗೆ ತರಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.