ADVERTISEMENT

ಡಿಸೆಂಬರ್ 25, 1967

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 19:30 IST
Last Updated 24 ಡಿಸೆಂಬರ್ 2017, 19:30 IST

‘ವಿಧಾನ ಮಂಡಲಗಳು ರಸ್ತೆಗಳಾಗದಿರಲಿ’

ಶಾಂತಿನಿಕೇತನ, ಡಿ. 25– ವಿಧಾನಮಂಡಲಗಳನ್ನು ರಸ್ತೆಗಳಾಗಿ ಪರಿವರ್ತಿಸುವುದು ಪ್ರಜಾಪ್ರಭುತ್ವಕ್ಕೆ ವ್ಯತಿರಿಕ್ತವೆಂದು ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಷ್ಠಾಪಿತವಾಗಿರುವ ಜನತೆಯ ಪವಿತ್ರ ಹಕ್ಕು ಅವರ ಚಿಂತನ ಮತ್ತು ವಿವೇಚನೆಗಳಿಂದ ವ್ಯಕ್ತಗೊಳ್ಳುವುದು ಅವಶ್ಯವೆಂದು ಅವರು ನುಡಿದರು.

ADVERTISEMENT

ವಿಶ್ವ ಭಾರತಿಯ ಆಚಾರ್ಯರೂ ಆದ ಶ್ರೀಮತಿ ಗಾಂಧಿಯವರು ಇಂದು ಬೆಳಿಗ್ಗೆ  ಇಲ್ಲಿ ಮಾವಿನ ತೋಪಿನಲ್ಲಿ ಅದರ ಘಟಿಕೋತ್ಸವದ ಅಧ್ಯಕ್ಷ ಭಾಷಣ ಮಾಡುತ್ತಾ, ‘ನಾವು ಸ್ವಾತಂತ್ರ್ಯದ ಮೂರನೇ ದಶಕದಲ್ಲಿ ಅಡಿಯಿಡುತ್ತಿರುವಾಗ ಪ್ರಜಾಪ್ರಭುತ್ವ ಕುರಿತು ಅತಿಸರಳ ಅಭಿಪ್ರಾಯಗಳು ಪ್ರಚಲಿತಗೊಳ್ಳತೊಡಗಿವೆ. ಜನರು ಮಾಡಿದ್ದೆಲ್ಲಾ ಸರಿ ಎಂಬುದೊಂದು ಭಾವನೆಯೂ ಇದೆ. ಪ್ರತಿಯೊಂದು ಪ್ರಜಾತಂತ್ರವೂ ತನ್ನ ತನ್ನ ಸಂಪ್ರದಾಯವನ್ನು ರೂಪಿಸಿಕೊಳ್ಳುತ್ತದೆ. ನೀರೊಂದೇ ಅಲ್ಲ, ದಂಡೆಯೂ ಸೇರಿದರೆ ಮಾತ್ರವೇ ನದಿಯಾಗುವುದು’ ಎಂದರು.

ರಾಜ್ಯದಲ್ಲಿ ಹಿಂದಿ ವಾರ್ಸಿಟಿ ಸ್ಥಾಪನೆಗೆ ಎಸ್.ಎನ್. ಸಲಹೆ

ಬೆಂಗಳೂರು, ಡಿ. 24– ರಾಜ್ಯದಲ್ಲಿ ಹಿಂದಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ತಮ್ಮ ತೀವ್ರ ಆಸಕ್ತಿ ವ್ಯಕ್ತಪಡಿಸಿದರು.

ಕೆಲವು ವರ್ಷಗಳ ಹಿಂದೆಯೇ ರಾಜ್ಯ ಈ ವಿಷಯವನ್ನು ಪ್ರಸ್ತಾಪಿಸಿತ್ತು ಎಂದು ಅವರು ವರದಿಗಾರರಿಗೆ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.