ADVERTISEMENT

ಬುಧವಾರ, 15–2–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 19:30 IST
Last Updated 14 ಫೆಬ್ರುವರಿ 2017, 19:30 IST
ಶಾಂತಿಯುತ ಮತದಾನಕ್ಕೆ ಪರಿಪೂರ್ಣ ವ್ಯವಸ್ಥೆ
ನವದೆಹಲಿ, ಫೆ. 14– ರಾಜಕೀಯ ಪಕ್ಷಗಳ ಭವಿಷ್ಯಕ್ಕಿಂತ ವ್ಯಕ್ತಿಗಳಿಗೇ ಪ್ರಾಧಾನ್ಯ.
 
ನಾಳೆ ಮತದಾನ ಪ್ರಾರಂಭವಾಗಲಿರುವ ನಾಲ್ಕನೆಯ ಮಹಾ ಚುನಾವಣೆಯಲ್ಲಿ ಕಾಣುತ್ತಿರುವ ಮುಖ್ಯ ಅಂಶ.
 
ಸಾಮಾಜಿಕ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ, ಕ್ಲಿಷ್ಟ ಆರ್ಥಿಕ ಸ್ಥಿತಿ, ಆಹಾರ ಅಭಾವ, ಇತ್ತೀಚಿನ ವೈಪರೀತ್ಯಗಳ ಫಲವಾಗಿ ಭಾರತದಲ್ಲಿ  ರಾಜಕೀಯ ಕಟ್ಟಡ ಕುಸಿಯಬಹುದೆಂದು ಸ್ವದೇಶ, ವಿದೇಶಗಳಲ್ಲಿ ಕೇಳಿಬರುತ್ತಿರುವ ಪಿಸುಣದ ಮಾತು ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ.
 
ಕಳೆದ ಮೂರು ಚುನಾವಣೆಗಳಲ್ಲಿದ್ದಂತೆ ರಾಷ್ಟ್ರದಲ್ಲಿ ಸುಭದ್ರ ಸ್ಥಿತಿಯನ್ನು ನೆಲಸುವಂತೆ ಮಾಡುವುದಾಗಿ ಆಶ್ವಾಸನೆ ಕೊಡುವ ನೆಹರು ಅವರಂತಹ ಆಕರ್ಷಕ ನಾಯಕ ಈ ಬಾರಿ ಇಲ್ಲ. ಅಲ್ಲದೆ ಆರ್ಥಿಕ ದುಃಸ್ಥಿತಿಯ ಹಿನ್ನೆಲೆಯಲ್ಲಿ ಪಂಚವಾರ್ಷಿಕ ಯೋಜನೆಯಿಲ್ಲದೆ ಆಡಳಿತ ಪಕ್ಷ ಚುನಾವಣಾ ಕಣಕ್ಕಿಳಿದಿದೆ.
 
***
ಶ್ರೀಮತಿ ಲಿಮಯೆ ದೂರು: ಲಿಮಯೆ ಮೇಲಿನ ಹಲ್ಲೆ ಹಿಂದೆ ಒಬ್ಬ ಸಚಿವರ ಕೈವಾಡ
ಮುಂಘೇರ್, ಫೆ. 14–  ತಮ್ಮ ಪತಿ ಮಧುಲಿಮಯೆ ಅವರ ಮೇಲೆ ನಿನ್ನೆ ನಡೆದ ಹಲ್ಲೆ ಪೂರ್ವಯೋಜಿತವಾದ ಹಾಗೂ ಪೂರ್ವನಿರ್ದೇಶಿತವಾದ ಕೃತ್ಯವೆಂದು ಆಪಾದಿಸುವ ತಂತಿ ಸಂದೇಶಗಳನ್ನು ಶ್ರೀಮತಿ ಮಧುಲಿಮಯೆ ಅವರು ರಾಷ್ಟ್ರಪತಿ ಹಾಗೂ ಪ್ರಧಾನಮತ್ರಿ ಅವರಿಗೆ ಕಳುಹಿಸಿದ್ದಾರೆ.
 
ಈ ಕೃತ್ಯದ ಹಿಂದಿನ ಸಂಚಿನಲ್ಲಿ ವಿರೋಧ ಪಕ್ಷವೊಂದರ ಜೊತೆ ಕೇಂದ್ರ ಸಚಿವರೊಬ್ಬರು ಒಳಗಾಗಿದ್ದರೆಂದೂ ಶ್ರೀಮತಿ ಲಿಮಯೆ ಆಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.