ADVERTISEMENT

ಬುಧವಾರ, 19–7–1967

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST

* ಐದು ವರ್ಷಗಳಲ್ಲಿ ಸ್ಥಳೀಯ ಭಾಷಾ ಮಾಧ್ಯಮದಲ್ಲಿ ಶಿಕ್ಷಣ
ನವದೆಹಲಿ, ಜುಲೈ 18–
ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಎಲ್ಲ ಸ್ತರಗಳಲ್ಲೂ ಸ್ಥಳೀಯ ಭಾಷೆಯನ್ನೇ ಶಿಕ್ಷಣದ ಮಾಧ್ಯಮವನ್ನಾಗಿ ಜಾರಿಗೆ ತರಲು ಕೇಂದ್ರ ಸಂಪುಟ ಇಂದು ತಾತ್ವಿಕ ಒಪ್ಪಿಗೆ ನೀಡಿದೆ.
ಆಗಸ್ಟ್‌ 14ರಂದು ಸರ್ಕಾರ ಈ ಕುರಿತ ನೀತಿಯೊಂದನ್ನು ಜಾರಿಗೊಳಿಸಲಿದೆ.

* ಮುಂದಿನ ವರ್ಷದಿಂದ ಡೊನೇಷನ್‌ಗೆ ಮುಕ್ತಿ– ಸಚಿವ
ಬೆಂಗಳೂರು, ಜುಲೈ 18–
ಖಾಸಗಿ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಕಾಲೇಜುಗಳು ಸರ್ಕಾರದ ಅನುದಾನಕ್ಕೆ ಒಳಪಡುವುದರಿಂದ ಮುಂದಿನ ವರ್ಷದಿಂದ ಖಾಸಗಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಡೊನೇಷನ್‌ನಿಂದ ಮುಕ್ತಿ ಸಿಗಲಿದೆ ಎಂದು ಶಿಕ್ಷಣ ಸಚಿವ ಶ್ರೀ ಶಂಕರ ಗೌಡ ಇಂದು ವಿಧಾನಸಭೆಯಲ್ಲಿ ಹೇಳಿದರು.

* ಮೂರು ದಿನ ನಿಷೇಧಾಜ್ಞೆ
ಬೆಂಗಳೂರು, ಜುಲೈ 18
– ಬುಧವಾರದಿಂದ ಜಾರಿಯಾಗುವಂತೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೂರು ದಿನಗಳ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.  ಶಾಸಕ ಶ್ರೀ ವಾಟಾಳ್‌ ನಾಗರಾಜ್‌ ನೇತೃತ್ವದ ಕನ್ನಡ ಚಳವಳಿಗಾರರು ನಗರದಲ್ಲಿ ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಮತ್ತು ಬುಧವಾರ ಬಂದ್‌ಗೆ ಕರೆ ನೀಡಿದ್ದರಿಂದಾಗಿ ಶಾಂತಿಭಂಗವಾಗುವ ಸಾಧ್ಯತೆ ಇರುವುದರಿಂದ ನಿಷೇಧಾಜ್ಞೆ ಹೇರಲಾಗಿದೆ. ಈ ಮೂರು ದಿನಗಳಲ್ಲಿ ಮೆರವಣಿಗೆ, ಪ್ರತಿಭಟನೆ ನಡೆಸುವುದಾಗಲೀ, ಮೂರಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರುವುದಾಗಲೀ ಮಾಡಬಾರದು ಎಂದು ಪೊಲೀಸ್‌ ಆಯುಕ್ತರು ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.