ADVERTISEMENT

ಭಾನುವಾರ 18–6–1967

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 19:30 IST
Last Updated 17 ಜೂನ್ 2017, 19:30 IST

ಆಸ್ಫೋಟನೆ 6ನೆಯ ಅಣ್ವಸ್ತ್ರ ಪರೀಕ್ಷೆ
ಟೋಕಿಯೋ, ಜೂ. 17–
ಪಶ್ಚಿಮ ಚೀನಾದಲ್ಲಿ ಇಂದು ಹೈಡ್ರೊಜನ್ ಬಾಂಬಿನ ಪರೀಕ್ಷಾ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದುದಾಗಿ ಕಮ್ಯುನಿಸ್ಟ್ ಚೀನಾ ಪ್ರಕಟಿಸಿತು.

ಹೈಡ್ರೊಜನ್ ಬಾಂಬ್ ಪರೀಕ್ಷಾ ಪ್ರಯೋಗದಲ್ಲಿ ಚೀನೀ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ ಎಂದಷ್ಟೆ ಟೋಕಿಯೋದಲ್ಲಿ ಕೇಳಲಾದ ಜಪಾನಿ ಭಾಷೆಯ ಪೀಕಿಂಗ್ ರೇಡಿಯೋ ವರದಿ ತಿಳಿಸಿತು. ಈ ವರ್ಷದಲ್ಲಿ ನಡೆದ ಈ ಪ್ರಥಮ ಪ್ರಯೋಗವು ಕಮ್ಯುನಿಸ್ಟ್ ಚೀನವು ನಡೆಸಿದ ಆರನೆಯ ಅಣ್ವಸ್ತ್ರ ಪರೀಕ್ಷೆ.

ಚೀನದ ಬೆದರಿಕೆ
ಹಾಂಕಾಂಗ್, ಜೂ. 17–
ಭಾರತ–ಚೀನಗಳ ನಡುವಣ ಬಾಂಧವ್ಯಗಳನ್ನು ಭಗ್ನಗೊಳಿಸುವ ಮತ್ತು ಚೀನಿ ರಾಜತಾಂತ್ರಿಕ ಸಿಬ್ಬಂದಿಯನ್ನು ಹಿಂಸಿಸುವ ‘ಭಾರತ ಸರ್ಕಾರದ ಎಲ್ಲ ತುಚ್ಛ ಕ್ರಮಗಳಿಗೂ’ ದೃಢ ಸಂಕಲ್ಪದಿಂದ ತಾನು ಪ್ರತಿಕ್ರಮಗಳನ್ನು ಕೈಗೊಳ್ಳುವುದಾಗಿ ಚೀನವು ಇಂದು ಬೆದರಿಕೆ ಹಾಕಿದೆ.

ADVERTISEMENT

ಪೀಕಿಂಗ್‌ನಲ್ಲಿ ನಮ್ಮ ರಾಯಭಾರಿ ಕಚೇರಿ ದಿಗ್ಬಂಧನ– ಮುತ್ತಿಗೆ
ಪೀಕಿಂಗ್, ಜೂ. 17–
ಪೀಕಿಂಗ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಎಲ್ಲ ಸಿಬ್ಬಂದಿ, ಅವರ ಪತ್ನಿಯರು ಮತ್ತು ಕುಟುಂಬಗಳಿಗೆ ಕಚೇರಿಯ ಆವರಣದಲ್ಲಿ ಇಂದು ಚೀನಿಯರು ಮುತ್ತಿಗೆ ಹಾಕಿದ್ದಾರೆ.

ನವದೆಹಲಿಯಲ್ಲಿ ಚೀನಿ ರಾಯಭಾರಿ ಕಚೇರಿಯ ಮೇಲೆ ನಡೆದ ದಾಳಿಗೆ ಇದು ಪ್ರತೀಕಾರವೆಂಬುದು ಸ್ಪಷ್ಟ. ಭಾರತದ ರಾಯಭಾರ ಕಚೇರಿಯಲ್ಲಿ ಇಂದು ಮಧ್ಯಾಹ್ನ ಸುಮಾರು 60 ಮಂದಿ  ಭಾರತೀಯರು ಆಶ್ರಯ ಪಡೆದಿದ್ದರು. ಸಹಸ್ರಾರು ಮಂದಿ ಘೋಷಣೆ ಕೂಗುವ ಮತ ಪ್ರದರ್ಶಕರು ಕಚೇರಿಯನ್ನು ಸುತ್ತು ಗಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.