ADVERTISEMENT

ಮಂಗಳವಾರ, 28–3–1967

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST

‘ಚತುರ್ಥ ಯೋಜನೆ ಪುನರ್ವ್ಯವಸ್ಥೆ ಅಗತ್ಯ’

ನವದೆಹಲಿ, ಮಾ. 27– ಸಂಪತ್ಸಾಧನೆಗಳಿಗೆ ಸರಿತೂಗುವಂತೆ ನಾಲ್ಕನೆ ಯೋಜನೆಯ ಪುನರ್ವ್ಯವಸ್ಥೆ ಅಗತ್ಯವೆಂದು ಉಪಪ್ರಧಾನಿ ಮುರಾರಜಿ ದೇಸಾಯಿ ಅವರು ಇಲ್ಲಿ ಹೇಳಿದರು.

ಬಜೆಟ್ ಮೇಲಿನ ಚರ್ಚೆಗೆ ಅವರು ಉತ್ತರ ಕೊಡುತ್ತಾ ಅಭಿವೃದ್ಧಿ ಯೋಜನೆಗಳನ್ನು ಕಡಿಮೆ ವೆಚ್ಚದಲ್ಲಿ ಪರಮಾವಧಿ ಉಪಯುಕ್ತ ಪರಿಣಾಮಗಳನ್ನು ನೀಡುವ ರೀತಿಯಲ್ಲಿ ನಿರ್ವಹಿಸಬೇಕಾದ ಅಗತ್ಯವನ್ನು  ಅವರು ಒತ್ತಿ ಹೇಳಿದರು.

ADVERTISEMENT

***

ವಕ್ಷ ದ್ವೇಷ

ನ್ಯೂಯಾರ್ಕ್, ಮಾ. 27– ನ್ಯೂಯಾರ್ಕ್ ನಗರದ ರಾತ್ರಿ ವಿಲಾಸ ಗೃಹಗಳಲ್ಲಿ ಕೆಫೆ ಮತ್ತು ರೆಸ್ಟುರಾಗಳಲ್ಲಿ ಹಾಗೂ ಸಾರ್ವಜನಿಕರಿಗೆ ಪ್ರವೇಶಾವಕಾಶವಿರುವ ಇತರ ಸ್ಥಳಗಳಲ್ಲಿ ಕೆಲಸ ಮಾಡುವ ಮಹಿಳಾ ನೌಕರರು ತಮ್ಮ ವಕ್ಷವನ್ನು ಪೂರ್ಣವಾಗಿ ಪಾರದರ್ಶಕವಲ್ಲದ ಯಾವುದೇ ವಸ್ತುವಿನಿಂದ ಮುಚ್ಚಿಕೊಂಡಿರಬೇಕೆಂದು ನ್ಯೂಯಾರ್ಕ್ ನಗರದ ಪುರಪಿತೃಗಳು ಬಹುಮತದಿಂದ ನಿರ್ಣಯಿಸಿದ್ದಾರೆ.

ಸ್ಯಾನ್‌ಫ್ರಾನ್ಸಿಸ್ಕೊ ನಗರದ ವಿಲಾಸ ಗೃಹವೊಂದರಲ್ಲಿರುವ ಯುವಾನ್ ಎಂಬ  ಮೋಹನಾಂಗಿ ಈ ನಿರ್ಧಾರವನ್ನು ಟೀಕಿಸಿ  ‘ಇದು ಕಮ್ಯುನಿಸ್ಟರ ಮಾದರಿಯ ನಿರ್ಣಯ ಆದರೆ ನಾವಿರುವುದು ರಷ್ಯದಲ್ಲಲ್ಲ’ ಎಂದಿದ್ದಾಳೆ.

***

ಗೊಮ್ಮಟ ದರ್ಶನಕ್ಕೆ ಇರುವೆ ಸಾಲಿನಂತೆ ಬೆಟ್ಟ ಏರಿಕೆ

ಶ್ರವಣಬೆಳಗೊಳ, ಮಾ. 27– ಈ ಕ್ಷೇತ್ರದಲ್ಲಿ ತುಂಬಿ ತುಳುಕುತ್ತಿರುವ ಭಕ್ತವೃಂದ ಗೋಮಟೇಶ್ವರನ ದರ್ಶನಕ್ಕಾಗಿ ಬೆಳಿಗ್ಗೆ 5 ಗಂಟೆಗೆ ಮೈಲಿಗಟ್ಟಲೆ ಕ್ಯೂ ನಿಲ್ಲುತ್ತಿದೆ.

ಎಲ್ಲರೂ ಉತ್ತರದ ದ್ವಾರದಿಂದ ವಿಂಧ್ಯಗಿರಿ ಏರಿ, ಪಶ್ಚಿಮದ ಕಡೆಯಿಂದ ಕೆಳಕ್ಕೆ ಇಳಿಯುವ ವ್ಯವಸ್ಥೆ ಮಾಡಲಾಗಿದೆ. ಬಿಸಿಲು ಏರಿದಂತೆಲ್ಲಾ ಕ್ಯೂ ಕಮ್ಮಿಯಾದರೂ ಕೂಡ ಸಂಜೆ ಹೊತ್ತಿಗೆ ಅತ್ಯಧಿಕವಾಗಿ ನಡು ರಾತ್ರಿಯವರೆಗೂ ಇರುವೆ ಸಾಲಿನಂತೆ ಜನರ ಸಾಲು ಕಾಣುತ್ತಿತ್ತು.

***

ಎಚ್.ಎ.ಎಲ್.ನಲ್ಲಿ ಕೃಷಿ ವಿಮಾನಗಳ ತಯಾರಿಕೆ

ನವದೆಹಲಿ, ಮಾ. 27– ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ನೆರವಾಗಲು ಹಿಂದೂಸ್ತಾನ್ ವಿಮಾನ ಕಾರ್ಖಾನೆಯು ಕೃಷಿ ವಿಮಾನಗಳನ್ನು ತಯಾರಿಸಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.