ADVERTISEMENT

ಮಂಗಳವಾರ 30–8–1966

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST

ಸಂಸತ್ತಿನಲ್ಲಿ ನಾಲ್ಕನೆ ಯೋಜನೆ ಕರಡು ರೂಪರೇಷೆ ಮಂಡನೆ
ನವದೆಹಲಿ, ಆ. 29–
ಸ್ವಾವಲಂಬನೆ ಮತ್ತು  ಸಮಾಜವಾದಗಳೇ ನಿರ್ದೇಶಿತ ಗುರಿಯಾದ ನಾಲ್ಕನೆ ಪಂಚವಾರ್ಷಿಕ ಯೋಜನೆಯ ಕರಡು ರೂಪರೇಷೆಯನ್ನು ಯೋಜನಾ ಮಂತ್ರಿ ಶ್ರೀ ಅಶೋಕ ಮೆಹ್ತಾ ಅವರು ಇಂದು ಪಾರ್ಲಿಮೆಂಟಿಗೆ ಸಲ್ಲಿಸಿದರು.

ಇನ್ನು ಹತ್ತು ವರ್ಷಗಳ ಅವಧಿಯಲ್ಲಿ ಸ್ವಯಂಪೋಷಿತ ಅಭಿವೃದ್ಧಿ ಸಾಧ್ಯವಾಗುವಂತೆ ತ್ವರಿತಗತಿಯ ಆರ್ಥಿಕ ಬಳವಣಿಗೆಗೆ ಈ ಯೋಜನೆ ಕರೆ ನೀಡಿದೆ.

*
ಬೆಲೆ ಹತೋಟಿಗೆ ಕ್ರಮ ಕೈಗೊಳ್ಳಲು  ಕರೆ
ನವದೆಹಲಿ, ಆ. 29– 
ಆಹಾರ ಧಾನ್ಯ, ಬಟ್ಟೆ ಮತ್ತು ಖಾದ್ಯ ತೈಲಗಳ ಚಿಲ್ಲರೆ ಮತ್ತು ಸಗಟು ಬೆಲೆಗಳನ್ನು  ಹತೋಟಿಯಲ್ಲಿಡಲು ಸರ್ಕಾರವು ಯತ್ನಿಸಬೇಕೆಂದು ಯೋಜನಾ ಆಯೋಗ ಕರೆ ನೀಡಿದೆ.

ಉತ್ಪಾದನಾ ವೆಚ್ಚ ಮತ್ತು  ಬೆಲೆಗಳ ಹೆಚ್ಚಳ ಹಾಗೂ ಕೂಲಿ ಮತ್ತು ಬೆಲೆಗಳ ಏರಿಕೆ ಇವುಗಳ  ಪರಸ್ಪರ ಸಂಬಂಧವನ್ನು  ಕಡಿಮೆ ಮಾಡಲು ಆಯೋಗ ಸೂಚಿಸಿದೆ.

*
ನೀರಾವರಿ ಖಾತೆ ವೀರೇಂದ್ರ ಪಾಟೀಲ್‌ ಅವರಿಗೆ
ಬೆಂಗಳೂರು,ಆ. 29–
ಸಚಿವ ಶ್ರೀ ಕೆ. ಮಲ್ಲಪ್ಪನವರ ನಿಧನದಿಂದ ತೆರವಾದ ಕೈಗಾರಿಕೆ ಮತ್ತು  ವಾಣಿಜ್ಯ  ಖಾತೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ  ಮುಖ್ಯಮಂತ್ರಿ ಶ್ರೀ  ನಿಜಲಿಂಗಪ್ಪನವರು ತಮ್ಮಲ್ಲಿರುವ  ದೊಡ್ಡ ಮತ್ತು  ಮಧ್ಯಮ ವರ್ಗದ ನೀರಾವರಿಯ ಖಾತೆಯನ್ನು ಲೋಕೋಪಯೋಗಿ  ಇಲಾಖೆ ಸಚಿವ ಶ್ರೀ ವೀರೇಂದ್ರ ಪಾಟೀಲ್‌ ಅವರಿಗೆ ಒಪ್ಪಿಸಿ ದ್ದಾರೆ.

ಕೈಗಾರಿಕಾ  ಸಹಕಾರ ಸಂಘಗಳ ಖಾತೆಯನ್ನು ಸಹಕಾರ ಸಚಿವ ಶ್ರೀ ಕೆ. ಪುಟ್ಟಸ್ವಾಮಿ ಅವರಿಗೆ ಒಪ್ಪಿಸಲಾಗಿದೆ.


*ಪಾಕ್‌ ಸೇನಾ ಚಟುವಟಿಕೆ ಕಡೆ ವಿಶ್ವಸಂಸ್ಥೆ ವೀಕ್ಷಕರ ಗಮನ
ನವದೆಹಲಿ, ಆ. 29– 
ಪಶ್ಚಿಮ ಗಡಿಯಲ್ಲಿ ಪಾಕಿಸ್ತಾನದ ಭಾರಿ ಸೇನಾ ಜಮಾವಣೆ ಬಗ್ಗೆ ಭಾರತವು ಕಾಶ್ಮೀರದಲ್ಲಿರುವ ವಿಶ್ವರಾಷ್ಟ್ರ ಸಂಸ್ಥೆ ವೀಕ್ಷಕರ ಗಮನವನ್ನು ಸೆಳೆದಿದೆ.

ಗಡಿಯ ನೆರೆಯಲ್ಲಿರುವ ತನ್ನ ಪ್ರವೇಶದೊಳಕ್ಕೆ ಪಾಕಿಸ್ತಾನವು ಹೆಚ್ಚು ಸಂಖ್ಯೆಯಲ್ಲಿ ಸೇನೆಯನ್ನು ನೆಲೆಗೊಳಿಸಿದೆಯೆಂದೂ ಪಾಕಿಸ್ತಾನದ  ಹಿರಿಯ ಸೇನಾ ಧಿಕಾರಿಗಳು ಈ  ಪ್ರದೇಶದಲ್ಲಿ ಪ್ರವಾಸ ಮಾಡುತ್ತಿರುವರೆಂದೂ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.