ADVERTISEMENT

ಶನಿವಾರ, 14–1–1967

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 19:30 IST
Last Updated 13 ಜನವರಿ 2017, 19:30 IST

ಪರದೇಶಗಳಲ್ಲಿ 8 ಸಾವಿರ ಭಾರತೀಯ ವೈಜ್ಞಾನಿಕರು ಮತ್ತು ತಂತ್ರಜ್ಞರ ಸೇವೆ
ಮದರಾಸ್‌, ಜ. 13–
‘ಯುನೆಸ್ಕೊ’ ಸಮೀಕ್ಷೆಯೊಂದರ ಪ್ರಕಾರ ಭಾರತದ ಸುಮಾರು 8,000 ಮಂದಿ ವಿಜ್ಞಾನಿಗಳು ಮತ್ತು ತಂತ್ರಜ್ಞರು ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಇಷ್ಟೇ ಸಂಖ್ಯೆಯ ವಿದೇಶಿ ವಿಜ್ಞಾನಿಗಳು ಈಗ ಭಾರತದಲ್ಲಿಇದ್ದಾರೆಂದು ‘ಯುನೆಸ್ಕೊ’ ಡೆಪ್ಯುಟಿ ಡೈರಕ್ಟರ್‌ ಜನರಲ್‌ ಡಾ. ಮಾಲ್‌ಕಂ ಆದಿಶೇಷಯ್ಯ ಇಂದು ಇಲ್ಲಿ ಮದ್ರಾಸ್‌ ಪತ್ರಿಕಾ ವರದಿಗಾರರ ಸಂಘದ ಸಭೆಯಲ್ಲಿ ತಿಳಿಸಿದರು.

ಪ್ರತಿಭಾವಂತರು ವಲಸೆ ಹೋಗುವುದನ್ನು ತಡೆಗಟ್ಟಿ ಭಾರತಕ್ಕೆ ಮರಳಿ ಬರುವಂತೆ ಮಾಡಲು ಸೂಕ್ತ ವಾತಾವರಣ ಕಲ್ಪಿಸಬೇಕೆಂದೂ
ಅವರು ಹೇಳಿದರು. ಪ್ರತಿವರ್ಷ ಶೇ 10ರಷ್ಟು ವಿಜ್ಞಾನಿಗಳು ಸ್ವದೇಶಕ್ಕೆ ವಾಪಸಾದರೂ ರಾಷ್ಟ್ರಕ್ಕೆ ಹೆಚ್ಚಿನ ಲಾಭವಾಗುವುದೆಂದು ಡಾ. ಆದಿಶೇಷಯ್ಯ ತಿಳಿಸಿದರು.

ದುಬಾರಿ ಸಂಕ್ರಾಂತಿ
ಬೆಂಗಳೂರು, ಜ. 13– 
ಸಂಕ್ರಾಂತಿ ಹಂಚುವ ಹಬ್ಬ, ಸುಗ್ಗಿಯಲ್ಲಿ ಬರುವ ಸಂಕ್ರಾಂತಿ ಹಂಚಿ ತಿನ್ನುವುದಕ್ಕೆ ಒಂದು ಸಂದರ್ಭ, ಅಮೋಘ ಕಲ್ಪನೆ!
ಪರಂಪರೆಯನ್ನು ಸುಲಭವಾಗಿ ಬಿಡಲಾರದೆ ಇಂದು ಧರ್ಮಸಂಕಟ. ಹಂಚುವ ಎಳ್ಳು, ಅದಕ್ಕೆ ಬೆರೆಸುವ ಪದಾರ್ಥಗಳು ಒಂದೊಂದರ ಬೆಲೆಯೂ ಗಗನ ಮುಟ್ಟಿದೆ. ನೋವು–ಆನಂದ ಬೆರಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.