ADVERTISEMENT

ಶುಕ್ರವಾರ, 9–6–1967

​ಪ್ರಜಾವಾಣಿ ವಾರ್ತೆ
Published 8 ಜೂನ್ 2017, 19:30 IST
Last Updated 8 ಜೂನ್ 2017, 19:30 IST

* ಸಿನಾಯ್‌ ಪ್ರದೇಶದಲ್ಲಿ ಈಜಿಪ್ಟ್‌ ಸೇನೆಯ ಉಗ್ರ ಪ್ರತಿದಾಳಿ
ಇಸ್ರೇಲ್‌ ವಿರುದ್ಧ ಈಜಿಪ್ಟ್‌ ಸೇನೆಯು ಟ್ಯಾಂಕ್‌ ಮತ್ತು ವಿಮಾನ ಬಲದ ನೆರವಿನೊಡನೆ ಉಗ್ರ ಪ್ರತಿದಾಳಿಯನ್ನು ಸಿನಾಯ್‌ ಮರುಭೂಮಿಯಲ್ಲಿ ಆರಂಭಿಸಿರುವುದರಿಂದ ಗುರುವಾರ ಮಧ್ಯಪ್ರಾಚ್ಯ ಹೋರಾಟವು ಹೊಸ ವಿಷಮ ಘಟ್ಟವನ್ನು ಮುಟ್ಟಿದೆ.

ಸೂಯಜ್‌ ಕಾಲುವೆಯಿಂದ ಪೂರ್ವಕ್ಕೆ 30 ಮೈಲಿ ದೂರದಲ್ಲಿ ಮಿತ್ಲಾ ಕಣಿವೆ ಮತ್ತು ಬಿರ್‌ಗಫ್‌ ನಡುವೆ ಈಜಿಪ್ಟ್‌ ಪ್ರತಿದಾಳಿ ನಡೆಸಿದೆಯೆಂದು  ಇಸ್ರೇಲ್‌ ಒಪ್ಪಿಕೊಂಡಿದೆ. ಕಾಲುವೆ ಪ್ರದೇಶಕ್ಕೆ ಪಲಾಯನ ಮಾಡುವ ಮಾರ್ಗವನ್ನು ತೆರೆಯುವುದೇ ಕೈರೋ ಕಾರ್ಯಾಚರಣೆಯ ಉದ್ದೇಶವೆಂದು ಟೆಲ್‌ ಅವೀವ್‌ ವಿವರಿಸಿದೆ.

* ಕನ್ನಡ ಮಾಧ್ಯಮದ ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲೀಷ್‌ ಹಿಂದಿ ಡಿಪ್ಲೊಮಾ ಸಲಹೆ
ಬೆಂಗಳೂರು, ಜೂ. 8–
‘ಕನ್ನಡ ಮಾಧ್ಯಮದಲ್ಲಿ ಕಾಲೇಜು ಶಿಕ್ಷಣ ಮುಂದುವರಿಸುವ ವಿದ್ಯಾರ್ಥಿಗಳು ಇಂಗ್ಲೀಷ್‌ ಮತ್ತು ಹಿಂದಿಯಲ್ಲಿ ಸಾಕಷ್ಟು ವ್ಯಾವಹಾರಿಕ ಜ್ಞಾನ ಪಡೆಯಲು ಅವಕಾಶವಾಗುವಂತೆ  ಭಾಷಾಂತರಗಳ ಡಿಪ್ಲೊಮಾ ಕೋರ್ಸುಗಳನ್ನು ಆರಂಭಿಸಲಾಗುವುದು’.

* ಪ್ರತೀಕಾರ ಕ್ರಮ ಕೈಗೊಳ್ಳಲು ರಷ್ಯಕ್ಕೆ ಅರಬ್‌ ಕರೆ
ಮಾಸ್ಕೋ, ಜೂ. 8–
ಇಸ್ರೇಲ್‌ ವಿರುದ್ಧ ಪ್ರತೀಕಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಇಲ್ಲಿನ ಅರಬ್‌ ರಾಷ್ಟ್ರಗಳ ರಾಯಭಾರಿಗಳು ಇಂದು ರಷ್ಯ ಸರ್ಕಾರಕ್ಕೆ ಕೇಳಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

* ಪಶ್ಚಿಮ ಏಷ್ಯ ನೀತಿ ಬಗ್ಗೆ ಲೋಕಸಭೆಯಲ್ಲಿ ಘರ್ಷಣೆ, ಗಲಭೆ; ಸಭೆ ಹಠಾತ್ತನೆ ಅಂತ್ಯ
ನವದೆಹಲಿ, ಜೂ. 8– ಭಾರತ ಸರ್ಕಾರದ ಪಶ್ಚಿಮ ಏಷ್ಯ ನೀತಿಯ ಬಗ್ಗೆ ಇಂದು ಸಂಜೆ ಲೋಕಸಭೆಯಲ್ಲಿ ಸದಸ್ಯರ ನಡುವೆ ಘರ್ಷಣೆ ಉಂಟಾಯಿತು.

* ಷರತ್ತಿನ ಮೇಲೆ ಕದನ ವಿರಾಮಕ್ಕೆ ಇಸ್ರೇಲ್‌ ಒಪ್ಪಿಗೆ
ಇಸ್ರೇಲ್‌, ಜೂ. 8–
 ಸಂಬಂಧಪಟ್ಟ ಇತರ ಎಲ್ಲಾ ರಾಷ್ಟ್ರಗಳು ಕದನವಿರಾಮಕ್ಕೆ ಒಪ್ಪುವುದಾದರೆ, ವಿಶ್ವರಾಷ್ಟ್ರ ಸಂಸ್ಥೆಯು ನಿರ್ಣಯಿಸಿದಂತೆ ಕದನವಿರಾಮಕ್ಕೆ ತಾನು ಸಿದ್ಧವೆಂದು ಇಸ್ರೇಲ್‌ ಸರ್ಕಾರ ಇಂದು ಅಧಿಕೃತವಾಗಿ ಪ್ರಕಟಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT