ADVERTISEMENT

ಸೋಮವಾರ, 2–10–1967

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST

ಭಾರತ ಪಡೆ ಮೇಲೆ ಚೀನೀ ಗುಂಡು- ನಾಥುಲಾ ಸಮೀಪದ ಚೋಲಾದಲ್ಲಿ ಹೋರಾಟ (ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ಅ. 1– ಎರಡು ವಾರಗಳಿಂದ ಸ್ತಬ್ಧ ಪರಿಸ್ಥಿತಿ ಇದ್ದ ಸಿಕ್ಕಿಂ–ಟಿಬೆಟ್ ಗಡಿಯಲ್ಲಿ ಇಂದು ಪುನಃ ಚೀನೀಯರು ಗುಂಡಿನ ದಾಳಿ ಪ್ರಾರಂಭಿಸಿದರು.

ಸೆಪ್ಟೆಂಬರ್ 11ರಿಂದ 14ರವರೆಗೆ ಗುಂಡಿನ ದಾಳಿ–ಪ್ರತಿದಾಳಿಗಳು ನಡೆದ ನಾಥುಲಾದ ವಾಯವ್ಯಕ್ಕೆ ಮೂರೂವರೆ ಮೈಲಿ ದೂರದಲ್ಲಿನ ಚೋಲಾದ ಬಳಿ ಭಾರತೀಯ ಪಡೆಗಳ ಮೇಲೆ ಚೀನೀಯರು ಇಂದು ಬೆಳಿಗ್ಗೆ 9.30ರಲ್ಲಿ ಯಾವ ಪ್ರಚೋದನೆಯೂ ಇಲ್ಲದೆ ಗುಂಡು ಹಾರಿಸಿದರು.

ADVERTISEMENT

ಹಿಂದಕ್ಕೆ ಪುಟಿಯದ ಬಂದೂಕುಗಳನ್ನೂ ತುಕಡಿ ಮಾರ್ಟರ್‌ಗಳನ್ನು ಅವರು ಬಳಸಿದರು. ಭಾರತೀಯ ಪಡೆಗಳು ಪ್ರತಿ ಗುಂಡುಹಾರಿಸಿ, ಸೂಕ್ತ ಉತ್ತರವಿತ್ತವು. ಎರಡೂ ಕಡೆ ಸಾವು ನೋವುಗಳು ಸಂಭವಿಸಿವೆ. ಆದರೆ ವಿವರಗಳು ಗೊತ್ತಾಗಿಲ್ಲ.

**

ದಾಳಿ ಉಲ್ಬಣಗೊಂಡರೆ ಸವಾಲು ಎದುರಿಸಲು ಭಾರತ ಸಿದ್ಧ: ಇಂದಿರಾ

ಮುಂಬೈ, ಅ. 1– ಇಂದು ಪುನಃ ಆರಂಭಿಸಿದ ಗುಂಡಿನ ದಾಳಿಯನ್ನು ಚೀನೀಯರು ಉಲ್ಬಣಗೊಳಿಸಿದರೆ ಸವಾಲನ್ನೆದುರಿಸಲು ಭಾರತದ ಜನತೆ ಹಾಗೂ ಯೋಧರು ಸಿದ್ಧವಾಗಿದ್ದಾರೆ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇಂದು ಇಲ್ಲಿ ಎಚ್ಚರಿಕೆ ನೀಡಿದರು.

ಹೋರಾಟವು ಉಲ್ಬಣಗೊಳ್ಳದೆ ಸ್ಥಳೀಯ ಸ್ವರೂಪದ್ದಾಗಬಹುದೆಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

**

ಚಲೇಜಾವ್ ಚಳವಳಿ ಕಾಲದ ಮನೋಭಾವ ಈಗಲೂ ಅಗತ್ಯ: ಇಂದಿರಾ ಗಾಂಧಿ

ಮುಂಬೈ, ಅ. 1– ಚಲೇಜಾವ್ ಚಳವಳಿ ಕಾಲಕ್ಕೆ ವ್ಯಕ್ತವಾದ ಮನೋಭಾವವೇ ಈಗಲೂ ರಾಷ್ಟ್ರವು ಎದುರಿಸುತ್ತಿರುವ ಕಷ್ಟಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅತ್ಯಗತ್ಯವಾಗಿದೆಯೆಂದು ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.