ADVERTISEMENT

ಅಜಾಗರೂಕತೆ ತಪ್ಪಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಫೆಬ್ರುವರಿ 2016, 19:31 IST
Last Updated 7 ಫೆಬ್ರುವರಿ 2016, 19:31 IST

ಚಾಲಕನ ಅಜಾಗರೂಕತೆಯಿಂದಾಗಿ ಮೊನ್ನೆ ಶಿಂಷಾ ನದಿಗೆ ಬಸ್ ಬಿತ್ತು. ವಾಹನ ಚಾಲನೆ ಮಾಡುತ್ತ ಬಾಟಲಿ ನೀರು ಕುಡಿದದ್ದೆ ಇದಕ್ಕೆ ಕಾರಣ.
ಹೆದ್ದಾರಿಗಳಲ್ಲಿ ವಾಹನಗಳು ಅತಿ ವೇಗದಲ್ಲಿ ಚಲಿಸುತ್ತಿರುತ್ತವೆ. ಸ್ವಲ್ಪ ಉದಾಸೀನ ಮಾಡಿದರೂ ಅಪಘಾತ ಸಂಭವಿಸುತ್ತದೆ.

ವಾಹನ ಚಾಲನೆ ಮಾಡುವಾಗ ಬಹಳಷ್ಟು ಚಾಲಕರು ಮೊಬೈಲ್‌ನಲ್ಲಿ ಮಾತನಾಡುವುದು, ಕುರುಕುಲು ತಿಂಡಿ ತಿನ್ನುವುದು, ನಿರ್ವಾಹಕರ ಜೊತೆ ಮಾತನಾಡುವುದು, ಬಾಟಲಲ್ಲಿ ನೀರು ಕುಡಿಯುವುದು, ಕಡ್ಡಿಪುಡಿ ಜಗಿಯುವುದು ಮಾಡುತ್ತಾರೆ. 

ವೇಗದಲ್ಲಿರುವ ವಾಹನ ನಿಯಂತ್ರಣ ತಪ್ಪಿ ಅವಘಡಗಳು ಉಂಟಾಗುತ್ತವೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಾರೆ. ಇದಕ್ಕೆಲ್ಲ ಇಲಾಖೆ ಕಡಿವಾಣ ಹಾಕಬೇಕು. ಪ್ರತಿ ಬಸ್ಸಿನಲ್ಲೂ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಬೇಕು. ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಚಾಲಕರ ವಿರುದ್ಧ ಕಠಿಣ  ಕ್ರಮ ಕೈಗೊಳ್ಳಬೇಕು.  ಪ್ರಯಾಣಿಕರ ನೆಮ್ಮದಿಗೆ ಇಂಥ ಕಠಿಣ ಕ್ರಮ ಅಗತ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT