ADVERTISEMENT

ಅಧ್ಯಯನ ಆಗಲಿ

ಬಿ.ಎಸ್‌.ಗವಿಮಠ, ಬೆಳಗಾವಿ
Published 24 ಏಪ್ರಿಲ್ 2015, 19:30 IST
Last Updated 24 ಏಪ್ರಿಲ್ 2015, 19:30 IST

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸುವ ಮೊದಲು ಅದರ ದೂರಗಾಮಿ ಪರಿಣಾಮಗಳನ್ನು ಅಧ್ಯಯನ ಮಾಡುವುದು ಅತ್ಯಂತ ಅಗತ್ಯವಿದೆ. ವಿಭಜನೆ ಮಾಡುವುದರಿಂದ ನಗರದ ಒಂದೊಂದು ವಿಭಾಗ ಅಥವಾ ವಲಯ ಒಂದೊಂದು ಭಾಷಿಕರ ದ್ವೀಪವಾಗಬಹುದು ಎಂಬ ಅನುಮಾನ ಇದೆ.

ಮುಂದೆ ಅಲ್ಲಿ ಕನ್ನಡಿಗರ ಧ್ವನಿ ಮತ್ತಷ್ಟು ಕ್ಷೀಣಿಸಬಹುದು. ಅದರಿಂದ ರಾಜ್ಯದ ಹಿತಕ್ಕೆ ಬೇರೆ ಬೇರೆ ರೀತಿಯಲ್ಲಿ ಅಪಾಯ ಒದಗುವ ಸಾಧ್ಯತೆಗಳೂ ಇದ್ದಿರಬಹುದು. ಸರ್ಕಾರ ಈ ಎಲ್ಲದರ ಕುರಿತು ಗಂಭೀರವಾಗಿ
ಯೋಚಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.